ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 

486) ಹಾಡು : ಭೂಲೆ ಸೇ ನ ಭೂಲೇಂಗೇ

ನನ್ನ ಅನುವಾದ:

ಮರೆತು ಕೂಡ ಮರೆಯುವದಿಲ್ಲ

ಕಳೆದಂಥ ಕಾಲ

487) ಹಾಡು : ಪನ್ನಾ ಕಿ ತಮನ್ನಾ

ನನ್ನ ಅನುವಾದ: 

ಪನ್ನಾಗೊಂದೇ ಆಸೆ ನೋಡಿ

ಹೀರಾ ನಂಗೆ ಸಿಕ್ಕು ಬಿಡಲಿ

ಹೋದ್ರೆ ಹೋಗಲಿ ನನ್ನ ಪ್ರಾಣ

ಹೋದ್ರೆ ಹೋಗಲಿ ನನ್ನ ಹೃದಯಾ

488) ಹಾಡು : ಚುಪ್ಕೆ ಚುಪ್ಕೆ ರಾತ ದಿನ

ನನ್ನ ಅನುವಾದ:

ಸದ್ದೇ ಇಲ್ಲದೆ ಹಗಲೂ ಇರುಳೂ

ಕಣ್ಣೀರ ಹರಿಸಿದ್ದು ನೆನಪಿದೆ

ನನಗೋ ಪ್ರೇಮದ ಆ ದಿನಮಾನ

ಇಂದೂ ನೆನಪಿದೆ

ಪರದೇ ಮರೆಯಲ್ಲಿ ನಾ ನನ್ನನು

ಮರೆಮಾಡಿದ್ದು ನೆನಪಿದೆ

ಮತ್ತೆ ಸೆರಗಿಂದ ನೀ ಮುಖ ಮುಚ್ಚಿದ್ದು 

ನೆನಪಿದೆ

ನನಗೋ ಪ್ರೇಮದ ಆ ದಿನಮಾನ

ಇಂದೂ ನೆನಪಿದೆ

ಸದ್ದೇ ಇಲ್ಲದೆ ಹಗಲೂ ಇರುಳೂ

ಕಣ್ಣೀರ ಹರಿಸಿದ್ದು ನೆನಪಿದೆ

 

ಸುಡುಸುಡುವ ಮಧ್ಯಾಹ್ನದಲ್ಲಿ ನೀ

ನನ್ನನು ಕರೆಯ ಬಂದದ್ದು

ಆ ದಿನ ನನ್ನ ಮನೆಗೆ ಬರಿಗಾಲಲ್ಲಿ

 ಬಂದದ್ದು 

ನೆನಪಿದೆ

ನನಗೋ ಪ್ರೇಮದ ಆ ದಿನಮಾನ

ಇಂದೂ ನೆನಪಿದೆ

ಸದ್ದೇ ಇಲ್ಲದೆ ಹಗಲೂ ಇರುಳೂ

ಕಣ್ಣೀರ ಹರಿಸಿದ್ದು ನೆನಪಿದೆ

489) ಹಾಡು : ಸಾವಲೀ ಸಲೋನೆ

ನನ್ನ ಅನುವಾದ: 

ಪ್ರೇಮ ಪಾತ್ರಳೇ

ನಿನ್ನ ಕಂಗಳ ಕೊಳದಿ

ಕಳೆಯಿತು ಎಲ್ಲಿ ನನ್ನ ಹೃದಯ

ನಾನಂತೂ ಅರಿಯೆ ಹೋ

490) ಹಾಡು : ಯಾದ್ ನ ಆಯೆ

ನನ್ನ ಅನುವಾದ:

ಬರಲಿಲ್ಲ ಮುಂಜಾನೆ

ಬರಲಿಲ್ಲ ಸಂಜೆ

ಯಾವ ದಿವಸ

ನಿನ ನೆನಪು ಬರಲಿಲ್ಲ

ಬರಲಿಲ್ಲ ನೆನಪು

491) ಹಾಡು : ಐಸೀ ಲಾಗೀ ಲಗನ್

ನನ್ನ ಅನುವಾದ:

ಭಕ್ತಿ ಆಯಿತು ಇಷ್ಟೊಂದು ಮೀರೆಗೆ

ಆಕೆ ಬೀದಿಬೀದಿಲಿ ಹರಿಸ್ತುತಿ ಮಾಡಿದಳು

ಮಹಲಲ್ಲಿ ಬೆಳೆದೋಳು ಆಗಿ ಜೋಗಿಣಿ

ಮೀರಾ ರಾಣಿ ಹುಚ್ಚಿ ಅನಿಸಿಕೊಂಡಳು

 

ಯಾರೂ ತಡೆದಿಲ್ಲ ಅವಳ 

ಯಾರೂ ಬೈದಿಲ್ಲ ಅವಳ

ಮೀರೆ ಗೋವಿಂದ ಗೋಪಾಲ ಹಾಡಿದಳು

ಕೂತು ಸಂತರಾ ಜತೆ

ಕೃಷ್ಣನ ಬಣ್ಣ ಹೊಂದಿ

ಮೀರಿ ಮಾಡಿದಳು ಪ್ರಿಯತಮನ ಓಲೈಕೆಯ

 

(ರಾಜನು ವಿಷ ಕೊಟ್ಟನು

ಆಯಿತದು ಅಮೃತ

ಮೀರೆ ಸಾಗರಕೆ ನದಿಯಾದಳು

ಸಹಿಸಿ ದುಃಖ

ಬಾಯಿಂದ ಗೋವಿಂದ ಅಂದಳು

ಮೀರಾ ಗೋವಿಂದ ಗೋಪಾಲ ಹಾಡಿದಳು)

492) ಹಾಡು : ಪಿಯಾ ತೂ ಅಬ ತೋ ಆಜಾದಲ್ಲಿ

ಮೋನಿಕಾ, ಓ ಮೈ ಡಾರ್ಲಿಂಗ್

ನನ್ನ ಅನುವಾದ:

ಮೋನಿಕಾ, ಓ ನನ್ನ ಡಾರ್ಲಿಂಗ್

( ತನುವಿನ ಬೆಂಕಿ ತಣ್ಣಗೆ ಆಗಲಿ

ಹಾಗೇ ಅಪ್ಪಿಕೋ ನನ್ನ)

493) ಹಾಡು : ಗುಲಾಬಿ ಆಂಖೇ ಜೋ ತೇರಿ ದೇಖೀ

ನನ್ನ ಅನುವಾದ:

ಗುಲಾಬಿ ಕಣ್ಣು ನಿನ್ನವು ನೋಡಿ

ನಾನು ಕುಡುಕನಂತೆ ಆದೆನು

ಸಂಭಾಳಿಸಿ ನನ್ನ ಓ ನನ್ನ ಗೆಳೆಯರೇ

ನನ್ನ ನಿಯಂತ್ರಣ ಕಠಿಣ ಆಗಿದೆ

494) ಹಾಡು : ಜಮಾನೇ ಸೇ ಕಹೋ

ನನ್ನ ಅನುವಾದ: 

ಲೋಕಕ್ಕೆ ಸಾರಿಬಿಡಿ

ಒಬ್ಬಂಟಿ ನಾವಲ್ಲ

ನಮ್ಮ ಜತೆಜತೆಗೆ ಇಹವು

ಗಂಗೆಯ ಅಲೆ ತಾವು

495) ಹಾಡು : ತುಜೆ ಮೇರಿ ಯಾದ್ ನ ಆಯೀ

ನನ್ನ ಅನುವಾದ:

ನಿಂಗೆ ಬರಲಿಲ್ಲ ನನ್ನ ನೆನಪು

ಯಾರಿಗೆ ಏನು ಹೇಳುವುದು

ಹೃದಯ ಅತ್ತಿತೋ ಕಣ್ಣು ತುಂಬಿ ಬಂತೋ

ಯಾರಿಗೆ ಏನು ಹೇಳುವುದು

496) ಹಾಡು : ಔರ ಇಸ ದಿಲ ಮೇ ಕ್ಯಾ ರಖಾ ಹ್ಯ

ನನ್ನ ಅನುವಾದ:

ಮತ್ತೆ ಈ ಎದೆಯಲಿ 

ಇರುವುದು ಏನು

ನಿನ್ನದೆ ನೋವು

ಅಡಗಿದೆ ಇಲ್ಲಿ

ಬಗೆದು ನೋಡಲು

ಈ ಎದೆಯನ್ನು

ನಿನ್ನದೇ ಹೆಸರು ಕಾಣುವೆ ನೀನು

497) ಹಾಡು : ತುಂ ಬಿನ್ ಜಾನೂ ಕಹಾಂ

ನನ್ನ ಅನುವಾದ: 

ನಿನ್ ಹೊರತು

ಎಲ್ಲಿಗ್ ಹೋಗ್ಲಿ

ಈ ಬಾಳಲ್ಲಿ ಬಂದ ಮೇಲೆ

ಬೇರೆ ಏನೂ ಬಯಸೆನಾ

ಬಯಸಿ ನಿನ್ನನು

498) ಹಾಡು : ಆಂಖೋ ಮೇ ಬಸೇ ಹೋ

ನನ್ನ ಅನುವಾದ:

ಕಣ್ಣಲಿ ನೆಲೆಸಿರುವೆ

ಎದೆಯಲಿ ಮುಚ್ಚಿಡುವೆ

ನಿನ್ನನು ನೋಡಲು ಆಗಾಗ

ಅದ ಕನ್ನಡಿ ಮಾಡುವೆನು

499) ಹಾಡು : ವಾದಾ ಕರಲೇ ಸಾಜನಾ

ನನ್ನ ಅನುವಾದ: 

ಆಣೆಯ ಮಾಡು ನಲ್ಲನೇ

ನಿನ್ನ ವಿನ ನಾನಿರೆ

ನನ್ನ ವಿನ ನೀನಿರೆ

ನಾವಗಲೆವು

ಇದೋ ಆಣೆಯು

500) ಹಾಡು : ಇಸ್ ಜಹಾಂ ಕೀ ನಹೀ ಹೈ ತೇರೀ ಆಂಖೇ

ನನ್ನ ಅನುವಾದ:

ನಿನ ಕಣ್ಣು ಈ ಲೋಕದ್ದು ಅಲ್ಲವೇ ಅಲ್ಲ

ಯಾರು ಸ್ವರ್ಗದಿಂದ ಇವನು ತಂದರಿಲ್ಲಿಗೆ