ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು. 

521) ಹಾಡು : ಜಿಂದಗೀ ಜೂಠ ಹೈ

ನನ್ನ ಅನುವಾದ: 

ಬದುಕಿದು ಒಂದು ಸುಳ್ಳು

ಒಂದು ದಿನ ಬಯಲಾಗುವುದು

ಸಾವು ಮಾತ್ರ ಸತ್ಯವು

522) ಹಾಡು : ತೂ ಮೇರೆ ಪಾಸ್ ನಹೀ ತೂ ಮೇರೆ ಸಾಥ ಹೈ ಎಂದು ಯೂಟ್ಯೂಬಿನಲ್ಲಿ ಹುಡುಕಿದರೆ ಸಿಗುವ ಹಾಡು - ಯೆ ದೂರಿ ಅಬ ದೂರೀ ನಹೀ ಲಗತೀ ಹೈ ಎಂದು ಆರಂಭವಾಗುತ್ತದೆ.

ನನ್ನ ಅನುವಾದ: ನೀ ದೂರ ಇದ್ದ ಹಾಗೆ 

ಅನಿಸುವುದೇ ಇಲ್ಲವೋ

ನೀ ಹತ್ತಿರ ನನಗೆ ಇಲ್ಲವೋ

ನೀ ಜತೆಗೇ ಇದ್ದೀಯ

523) ಹಾಡು :

ಮೈ ತುಝೆ ಛೋಡ ಕೆ ಕಹಾಂ ಜಾವೂಂಗಾ

ನನ್ನ ಅನುವಾದ: 

ನಿನ್ನನು ಬಿಟ್ಟು ನಾ ಎಲ್ಲಿಗೆ ಹೋಗುವೆ



524) ಹಾಡು : ಮೈ ತೇರಾ ಥಾ ಮೈ ತೇರಾ ಹೂಂ

ನನ್ನ ಅನುವಾದ: 

ನಾ ನಿನ್ನೋನು ಇದ್ದೆ

ನಾ ನಿನ್ನೋನು ಇದ್ದೇನೆ

ನಾ ನಿನ್ನೋನೇ ಇರ್ತೇನೆ

ಜನ ಅನ್ಲಿ ನಂಗೆ ಹುಚ್ಚು

ಅಷ್ಟು ಪ್ರೀತಿ ನಂಗೆ ನಿನ್ನಲ್ಲಿ

525) ಹಾಡು : ತೇರೆ ನಾಮ ಕೀ ಸರಗಮ್ ಸೆ

ನನ್ನ ಅನುವಾದ: 

ನಿನ್ನ ಹೆಸರ ಸರಿಗಮದಿಂದ

ಪ್ರತಿಕ್ಷಣ ಸಂಗೀತಮಯ

ನಿನ್ನ ಹಾಜರಿಯಿಂದಲೇ

 ಶೂನ್ಯ ಮನದಲು ಗೀತೆಯ ಅಲಂಕಾರ

526) ಹಾಡು : ತೇರಾ ಸಾಥ್ ಹೈ ತೋ ಮುಝೆ ಕ್ಯಾ ಕಮೀ ಹೈ

ನನ್ನ ಅನುವಾದ: 

ನಿನ್ನ ಸಾಂಗತ್ಯ ಇರಲು ನನಗೇನು ಕೊರತೆ

ಕತ್ತಲಲ್ಲೂ ಬೆಳಕು ಕಾಣುವುದು ನನಗೆ

527) ಹಾಡು : ತನ್ ಮನ್ ಧನ್ ಸಬ್ ಹೈ ತೇರಾ

ನನ್ನ ಅನುವಾದ: 

ತನು ಮನ ಧನ ಎಲ್ಲಾ ನಿಂದೇ

ನೀನಿಲ್ಲದೆ ನಂದು ಏನಿದೆ

ಹಗಲು ರಾತ್ರಿ ನಿನ್ನ ನಾ ನೆನೆಯುವೆ

528) ಹಾಡು :

 ಓ ಪಿಯಾ ಓ ಪಿಯಾ ಪ್ಯಾರ್ ಇತನಾ ಕ್ಯೂ ಕಿಯಾ

ನನ್ನ ಅನುವಾದ: 

ಓ ಪ್ರಿಯಾ ಓ ಪ್ರಿಯಾ

ಮಾಡಿದೆ ಇಷ್ಟು ಪ್ರೀತಿ ಯಾಕೆ

ನನ್ನ ಹತ್ರ ಇದ್ದುದೆಲ್ಲವ ನಿನಗೆ ಕೊಟ್ಟೆನು

ಓ ಪ್ರಿಯೆ ಓ ಪ್ರಿಯೆ

ಹೇಳುತಾ ಇದೆ ನನ್ನ ಮನಸು

ನನ್ನ ಹತ್ರ ಇದ್ದುದೆಲ್ಲವ ನಿನಗೆ ಕೊಟ್ಟೆನು



529) ಹಾಡು : ಉನಕೋ ಭೀ ಹಮ ಸೆ ಮುಹಬ್ಬತ ಹೋ

ನನ್ನ ಅನುವಾದ: 

ಅವಗೂ ಪ್ರೀತಿ ನನ್ನಲಿ ಇರಬೇಕಿಲ್ಲ

ಪರಿಸ್ಥಿತಿ ಇಬ್ಬರದೂ ಒಂದೇ ಇರಬೇಕಿಲ್ಲ

530) ಹಾಡು : ಕಹೀಂ ದೀಪ ಜಲೆ ಕಹೀ ದಿಲ

ನನ್ನ ಅನುವಾದ: 

ಎಲ್ಲೋ ದೀಪ ಉರಿದಿದೆ

ಎಲ್ಲೋ ಹೃದಯ

ಸ್ವಲ್ಪ ಬಂದು ನೋಡು ಎಲವೋ ಪತಂಗ

ನಿನ್ನ ಅಂತಿಮ ಗತಿ ಏನು?