ನೀವು ಗಮನಿಸುವ ಹಾಗೆ ಇವು ಬಹುತೇಕ ಮೂಲದ ಧಾಟಿಯಲ್ಲೇ ಇದ್ದು ಅವುಗಳ ಸಂಗೀತವು ಸ್ಟಾರ್ ಮೇಕರ್, ಸ್ಮೂಲ್ , ಅಥವಾ ಯೂಟ್ಯೂಬ್ ಗಳಲ್ಲಿ ಸಿಕ್ಕರೆ ನೀವೂ ಜತೆಗೆ ಹಾಡಬಹುದು.
531) ಹಾಡು : ಓ ಪ್ರಿಯಾ ಓ ಪ್ರಿಯಾ (ಚಿತ್ರ ಕಹೀ ಪ್ಯಾರ ನ ಹೋ ಜಾಯೆ)
ನನ್ನ ಅನುವಾದ:
ಓ ಪ್ರಿಯಾ ಓ ಪ್ರಿಯಾ ಓ ಪ್ರಿಯಾ
ನಿನ ಹಾಗೆ ಯಾರೂ ಇಲ್ಲ ಓ ಪ್ರಿಯಾ
ಖುಷಿಯಾಗಿರು ಎಲ್ಲೇ ನೀನಿರು
ಇದು ನನ್ನ ಹೃದಯದ ಹಾರೈಕೆಯು
532) ಹಾಡು : ತುಝೆ ಸೂರಜ ಕಹೂಂ ಯಾ ಚಂದಾ
ನನ್ನ ಅನುವಾದ:
ನಿನ ಕರೆಯಲೆ ನನ ಸೂರ್ಯ ಚಂದ್ರ
ಎನ್ನಲೆ ನನ ದೀಪ ನಕ್ಷತ್ರ
ನನ ಹೆಸರ ಬೆಳಕಿಗೆ ತರುವಿ
ಲೋಕದಿ ನೀನು ನಾಳೆ
533) ಹಾಡು : ಚಿಂಗಾರಿ ಕೋಯಿ ಭಡಕೆ (ಚಿತ್ರ ಅಮರ್ ಪ್ರೇಮ್)
ನನ್ನ ಅನುವಾದ:
ಒಲೆಯು ಹೊತ್ತಿ ಉರಿದೊಡೆ
ಶ್ರಾವಣವು ಅದ ಆರಿಸಬಹುದು
ಶ್ರಾವಣವೇ ಬೆಂಕಿ ಹಚ್ಚಿದರೆ
ಅದ ಆರಿಸುವವರಾರು?
534) ಹಾಡು : ತೂ ಮೇರೆ ದಿಲ ಮೆ ರಹತೀ ಹೋ
ನನ್ನ ಅನುವಾದ:
ನೀ ನನ ಎದೆಯಲಿ ಇದ್ದೀಯಾ
ನಾ ನಿನ ಎದೆಯಲಿ ಇದ್ದೀನಿ
ನಾ ನಿನ್ನ ಪ್ರೀತಿಲಿ ಹುಚ್ಚಾದೆ
ಅದ ಈಗ ನಾನು ಹೇಳುವೆನು
535) ಹಾಡು : ಜಬ ನಾಮ ತೇರಾ ಪ್ಯಾರ ಸೆ ಲಿಖತೆ (ಗಜಲ್)
ನನ್ನ ಅನುವಾದ:
ನಿನ ಹೆಸರ ಪ್ರೀತಿಯಿಂದ ನನ ಬೆರಳು ಬರೆದ ವೇಳೆ
ನನ ಕಡೆಗೆ ಲೋಕ ತನ ಬೆರಳ ಎತ್ತುವುದು
536) ಹಾಡು : ಮುಝೆ ಫಿರ ವಹೀ ಯಾದ ಆನೆ ಲಗೀ ಹೈ (ಹರಿಹರನ್ ಅವರ ಗುಲ್ಫಾಂ ಆಲ್ಬಂನ ಹಾಡು)
ನನ್ನ ಅನುವಾದ:
ಅವಳು ಮತ್ತೆ ನೆನಪಾಗುತಾ ಇದ್ದಾಳೆ
ಯಾರ ಮರೆಯಲು ಯುಗಗಳೇ ಬೇಕಾದವು
537) ಹಾಡು :ಇಕ ರಾತ ಮೆ ದೋ ದೋ ಚಾಂದ್ ಖಿಲೆ
ನನ್ನ ಅನುವಾದ:
ಒಂದು ರಾತ್ರಿಲಿ ಚಂದ್ರ ಎರಡೆರಡು
ಒಂದು ಸೀರೆಯಲಿ ಇನ್ನೊಂದು ಮೋಡದಲಿ
538) ಹಾಡು : (ಪ್ಯಾರ್ ದಿವಾನಾ ಹೋತಾ ಹೈ - ಕಟೀ ಪತಂಗ ಚಿತ್ರದ ಹಾಡು) ಅದರ ಸಾಲು
ಶಮಾ ಕಹೇ ಪರವಾನೆಸೆ
ನನ್ನ ಅನುವಾದ:
ದೀಪವು ಹೇಳಿದೆ ಪತಂಗಕೆ
ನೀ ಸನಿಹ ಬರಲೇಬೇಡ
ನನ ಹಾಗೆ ಉರಿದುಹೋಗುವಿ
ಇಲ್ಲಿಗೆ ಬರಲೇಬೇಡ
ಯಾರು ಕೇಳರು ಅವರು ತಾವು
ಸುಟ್ಟು ಹೋಗುವರಷ್ಟೇ
539) ಹಾಡು : ಘುಂಗರೂ ಕಿ ತರಾಹ
ನನ್ನ ಅನುವಾದ:
ಗೆಜ್ಜೆ ಹಾಗೆ ನಾನು
ಸದ್ದು ಮಾಡುತಾ ಇರುವೆನು
ಒಮ್ಮೆ ಈ ಕಾಲಲಿ
ಒಮ್ಮೆ ಆ ಕಾಲಲಿ
ಅವ ಮೆರೆಸುತ್ತಾ ಇರುವೆನು
540) ಹಾಡು :ಅಜನಬಿ, ತುಮ್ ಜಾನೆ ಪಹಚಾನೇ
ನನ್ನ ಅನುವಾದ:
ಅಪರಿಚಿತೆ, ನೀ ತುಂಬಾ ಪರಿಚಿತಳ ಹಾಗೆ ಕಾಣುವಿಯಲ್ಲ
ಇದು ಬಹಳ ಆಶ್ಚರ್ಯಕರ
ಇದು ಹೊಚ್ಚ ಹೊಸ ಭೇಟಿ
ಆದರೂ ಅರಿಯೆ ಯಾಕೋ
ಅಪರಿಚಿತೆ, ನೀ ತುಂಬಾ ಪರಿಚಿತಳ ಹಾಗೆ ಕಾಣುವಿಯಲ್ಲ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!