ಕನ್ನಡದಂಥ ಭಾಷೆಯಲ್ಲಿ ಪದಗಳನ್ನು ಬರೆಯುವುದೂ, ಉಚ್ಚರಿಸುವುದೂ ಸುಮಾರು ಒಂದೇ ರೀತಿ
ಇರುವಾಗ, ಅದರಲ್ಲಿ ಸ್ಪೆಲಿಂಗ್ ಪ್ರಶ್ನೆ ಅಷ್ಟಾಗಿ ಕಾಣಬರುವುದಿಲ್ಲ. ಆದರೆ, ಇಂಗ್ಲಿಷ್
ನಂತಹ ನುಡಿಗಳಲ್ಲಿ ಹಲವರಿಗೆ ಅದೊಂದು ತೊಡಕಿನ ವಿಷಯವೇ.
ಯುಎಸ್ಎ ನಲ್ಲಿ
ಪ್ರತಿವರ್ಷ ಸ್ಪೆಲಿಂಗ್ ಬೀ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತೆ. ಕೆಳಗಿನ ಹಲವಾರು
ಹಂತಗಳಲ್ಲಿ ಗೆದ್ದು ಬಂದ ೧೧ ಮಕ್ಕಳ ನಡುವೆ ೧೩ ವರ್ಷದ ಕಾವ್ಯ ಶಿವಶಂಕರ್ ಎಂಬ ಮೈಸೂರು
ಮೂಲದ ಹುಡುಗಿ ೨೦೦೯ ರ ಸ್ಪೆಲಿಂಗ್ ಬೀ ಯಲ್ಲಿ ಅಗ್ರೇಸರಳಾಗಿ ಆಯ್ಕೆಯಾಗಿದ್ದಾಳೆ. ಇವಳು
ಈ ಸ್ಪರ್ಧೆಯಲ್ಲಿ ೩೦೦೦೦ ಡಾಲರ್ ಮೊತ್ತದ ಹಣವನ್ನೂ. ಮತ್ತಿತರ ಬಹುಮಾನಗಳನ್ನೂ
ಗೆದ್ದಿದ್ದಾಳೆ. ಇವಳಿಗೆ ಈ ಸ್ಪರ್ಧೆಗೆ ತರಪೇತಿ ಕೊಟ್ಟದ್ದು ತಂದೆ ಮಿರ್ಲೆ ಶಿವಶಂಕರ್.
ಕಾವ್ಯಳೊಡನೆ ಒಂದು ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ:
http://www.kannada.blogkut.com/
ಸ್ಪೆಲಿಂಗ್ ಬೀ ೨೦೦೯ - ಕಾವ್ಯ ಶಿವಶಂಕರ್
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳು
ಪ್ರತಿಕ್ರಿಯೆ (2)