85    oshovaani.blogspot.com   

ರಜನೀಶ್ ( ಓಶೋ) ಕುರಿತಾದ ಬ್ಲಾಗ್ ಇದು .  ಓಶೋ  ವಿಚಾರಧಾರೆಯನ್ನು ಅರಿಯಲು  ಈ ಬ್ಲಾಗ್  ನೆರವಾದೀತು.

ಗಾಂಧಿ  ಓಶೋ ಕಂಡಂತೆ  ಬರಹ  ಗಾಂಧಿ ಬಗ್ಗೆ ಒಂದು ಹೊಸ ನೋಟವನ್ನು ಕೊಡುತ್ತದೆ .
"  ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ   ಮೂಲಕ ಜೈನರ  ಬೆಂಬಲ ಪಡೆದರು . ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ.ಶೇ ೧ರಷ್ಟು ಹಿಂದು.  ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ...ಅಹಿಂಸೆಯ ಮೂಲಕ ಆತ ಜೈನರ ಬೆಂಬಲ ಪಡೆದ, ಹಿಂಸೆಯ ಅಭ್ಯಾಸವಿಲ್ಲದ ಮೇಲ್ವರ್ಗದ ಹಿಂದುಗಳ ಬೆಂಬಲವೂ ಗಾಂಧಿಗೆ ಸಿಕ್ಕಿತು. ಕ್ರಿಸ್ತ ಪ್ರತಿಪಾದಿಸಿದ ಅಹಿಂಸೆ ಹಾಗೂ ಶಾಂತಿಯ ಬಗ್ಗೆ ಮಾತಾಡಿದ್ದಕ್ಕಾಗಿ ಕ್ರಿಶ್ಚಿಯನ್ ಮಿಶಿನರಿಗಳನ್ನು ಪ್ರಭಾವಿಸುವಲ್ಲಿ ಆತ ಯಶಸ್ವಿಯಾದ. .....ಭಾರತೀಯರು ಹೋರಾಡಲು ಭಯ ಪಡುತ್ತಾರೆ. ಹಿಂದೆಯೂ ಅವರೆಂದೂ ಹೋರಾಡಿದವರಲ್ಲ.ಭಾರತೀಯರು ಹೋರಾಡುವುದಕ್ಕೆ ಸಿದ್ಧರಿಲ್ಲ ಹಾಗೂ ಹೋರಾಟಕ್ಕೆ ಅಗತ್ಯವಾದ ಶಸ್ತ್ರಾಸ್ತ್ರ ಭಾರತೀಯರಲ್ಲಿ ಇಲ್ಲ ಎಂಬುದನ್ನು ಬುದ್ಧಿವಂತ ಗಾಂಧಿ ಅರಿತಿದ್ದ. ..........ಈ ಸಂದರ್ಭದಲ್ಲಿ ಅಹಿಂಸೆಯೆಂಬುದು ಗಾಂಧಿ ಬಳಸಿದ ಅತ್ಯಂತ ಯಶಸ್ವಿ ರಾಜಕೀಯ ತಂತ್ರಗಾರಿಕೆಯಾಗಿತ್ತು…...ನನಗೆ ಗಾಂಧಿಯ ವರ್ತನೆಯಲ್ಲಿ ಅಹಿಂಸೆಯಾಗಲೀ, ಪ್ರೀತಿಯಾಗಲೀ ಕಾಣುವುದಿಲ್ಲ. .....

ಓಶೋ ಬರೆದ 'ಸಂಭೋಗದಿಂದ ಸಮಾಧಿಯ ಕಡೆಗೆ' ಅನ್ನುವ ಪುಸ್ತಕವನ್ನು ನಾನು ಓದಿಲ್ಲ.    ಆದರೆ  ಅದರ ಸಾರ ಇದು   ಇರಬಹುದು .   
ಮನುಷ್ಯನದು ಒಂದು ರತಿ – ಸ್ತ್ರೀ ಪುರುಷರದು.ಮತ್ತೊದು ರತಿಯೂ ಇದೆ, ನಿಮ್ಮ ಚೈತನ್ಯ ತನ್ನದೇ ಮೂಲವನ್ನು ಸೇರುವಾಗ ನೀವು ನಿಮ್ಮೊಂದಿಗೆ ಸಮ್ಮಿಳಿತರಾದಾಗ.
ಒಂದು ರತಿಯೂ ಇತರರಿಂದ ದೊರೆಯುವಂತಹುದು, ಮತ್ತೊಂದು ರತಿಯು ತನ್ನನ್ನೇ ತಾನು ಸೇರುವುದರಿಂದ | ನೀವು ನಿಮ್ಮೊಂದಿಗೆ ಮಿಲನ ಹೊಂದಿದಾಗ ಆ ಕ್ಷಣದಲ್ಲಿ ಸಿಗುವ ಆನಂದ ಮಹಾದಾನಂದ. ಅದೇ ಸಮಾಧಿ. ಸಂಭೋಗದಿಂದ ಸಮಾಧಿಯ ಆಭಾಸ ಮಾತ್ರವಿದೆ. ಸಮಾಧಿಯಲ್ಲಿ ಸಂಭೋಗದ ಪರಿಪೂರ್ಣತೆಯಿದೆ.

ಓಶೋ  ಬರೆದ ' ನನ್ನ ಪ್ರೀತಿಯ ಭಾರತ'   ಪುಸ್ತಕ ಪರಿಚಯದಿಂದ
ಆವತ್ತು ಇಂಗ್ಲೆಂಡ್ ಅನ್ನೋದು ಭಾರತದ ಒಂದು ಜಿಲ್ಲೆಗೆ ಸಮನಾಗಿತ್ತು. ಆದ್ರೂ ಕೂಡಾ ಭಾರತೀಯರು ಆಂಗ್ಲರ ಗುಲಾಮರಾದರು. ಅದಕ್ಕೆ ಕಾರಣ ಭಾರತದ ಮಣ್ಣು. ಈ ದೇಶದ ಮಣ್ಣಿನಲ್ಲಿ ಮಹಾವೀರ, ಬುದ್ಧ, ಪತಂಜಲಿಗಳು ಜನಿಸುತ್ತಾರೆಯೇ ಹೊರತು, ಒಬ್ಬ ಹಿಟ್ಲರ್, ಒಬ್ಬ ಮುಸಲೋನಿಯನ್ನು ಈ ನಾಡು ಜಗತ್ತಿಗೆ ನೀಡಲಾರದು. ಐದು ಸಾವಿರ ವರ್ಷದ ಇತಿಹಾಸದಿಂದ ಸಾಬೀತಾದ ಮಾತಿದು…
ಅಲೆಗ್ಸಾಂಡರ್, ಹಿಟ್ಲರ್ ಎಲ್ಲಾ ಜಗತ್ತನ್ನೇ ಗೆಲ್ಲಲು ಹೊರಟರು. ಅವರು ಶ್ರೇಷ್ಠರಲ್ಲ. ಯಾಕೆಂದರೆ ಅವರಿಗೆ ಅವರನ್ನೇ ಜಯಿಸಿಕೊಳ್ಳಲು ಆಗಲಿಲ್ಲ. ಮಹಾವೀರ, ಬುದ್ದರು ತಮ್ಮನ್ನು ತಾವು ಗೆದ್ದರು. ಆ ಮುಖೇನ ವಿಶ್ವವನ್ನೇ ಯಾರಿಗೂ ಗೊತ್ತಾಗದಂತೆ ಗೆದ್ದುಬಿಟ್ಟರು. ಅದು ಭಾರತದ ಶ್ರೇಷ್ಠತೆ… ಅಂದರೆ ಭಾರತ ಜಗತ್ತಿಗೆ ತನ್ನನ್ನು ತಾನು ಗೆಲ್ಲುವುದನ್ನ ಹೇಳಿ ಕೊಟ್ಟಂತಹ ರಾಷ್ಟ್ರ.



ಓಶೋ  ಬರೆದ 'ಧಮ್ಮಪದ' ಕುರಿತಾದ  ಪುಸ್ತಕಗಳ  ಸೆಟ್ ನ ಬೆಲೆ ರೂ.3000  ಅಂತೆ !     ಅದಾವುದೋ  ಜಪಾನ್ ನ   ಬೌದ್ಧ ಸಂಘ  ಉಚಿತ ಹಂಚಿಕೆಗೆಂದು  ಕನ್ನಡದಲ್ಲಿ   ಬರೆದ ಪುಸ್ತಕವನ್ನು ಬೆಂಗಳೂರು   ಚಾಮರಾಜಪೇಟೆಯ  ಕನ್ನ್ನಡ ಸಾಹಿತ್ಯ ಪರಿಷತ್ ನ  ಶನಿವಾರದ ಪುಸ್ತಕ ಸಂತೆಯಲ್ಲಿ
ಒಬ್ಬ ಗಡ್ಡಧಾರಿ ಮುದುಕ   ಹತ್ತುರೂಪಾಯಿಗೆ  ಕೊಟ್ಟಿದ್ದ . ಯಾರ ಜತೆಗೋ ಮಾತಾಡುತ್ತ    ದಾರಿ ಯಾವಾಗ  ಕಾಣುತ್ತೋ ( ಅಥವಾ ಮೋಕ್ಷ  ಯಾವಾಗ ಸಿಗುತ್ತೋ ?)  ಅಂತ  ನಿಟ್ಟುಸಿರು ಬಿಟ್ಟಿದ್ದ .  ಅದೇಕೋ  ಅವನ ಬಗ್ಗೆ   ಕರುಣೆ ಮೂಡಿತು . ಬಂಧನದಿಂದ ಬಿಡುಗಡೆ ಬಯಸಿ ತನ್ನ ಬಳಿ ಬಂದವನನ್ನು ' ಯಾರು ನಿನ್ನನ್ನು ಕಟ್ಟಿಹಾಕಿದ್ದಾರೆ ' ಅಂತ ಕೇಳಿದ ಝೆನ್ ಕತೆ ನೆನಪಾಯಿತು.

"ಸಮಯ ಎರಡು ಸುಸ್ಪಷ್ಟ ಖಂಡಗಳಾಗಿ ವಿಭಜಿತಗೊಳ್ಳುತ್ತದೆ – ಓಶೋ ಮೊದಲು ಮತ್ತು ಓಶೋ ನಂತರ."     ಅರರೆ!
"ಈತ ಭೌತಿಕತೆ ಮತ್ತು ಆಧ್ಯಾತ್ಮಿಕತೆಗಳೆರಡರಲ್ಲೂ ಸಮೃದ್ಧ." ಇರಬಹುದೇನೋ.
ಈತ      ಎಂದೂ  ಹುಟ್ಟಲಿಲ್ಲ,     ಎಂದೂ  ಸಾಯಲಿಲ್ಲ , ಇಂಥಿಂಥ ತಾರೀಕುಗಳ ನಡುವೆ ಭೂಮಿಗೆ  ಭೆಟ್ಟಿ ಕೊಟ್ಟನು     ಅಂತ ಓಶೋ ಸಮಾಧಿಯ  ಮೇಲೆ   ಬರೆದಿದ್ದಾರಂತೆ  !

ಓಶೋ ಕುರಿತಾದ  ಜಾಲತಾಣಗಳು ,   ಕರ್ನಾಟಕದಲ್ಲಿ ಓಶೋ ಕೇಂದ್ತ್ರಗಳು,   ಓಶೋ ಕನ್ನಡ ಸಾಹಿತ್ಯ    ಇವುಗಳ ಪಟ್ಟಿ    ,     ಓಶೋ ಪುಸ್ತಕಗಳ ಪರಿಚಯ  ಇಲ್ಲಿವೆ  ಅಂದರೆ  ಈ ಬ್ಲಾಗಿನಲ್ಲಿ  ಇವೆ.