ಆಕಾಶದಲ್ಲಿ ಇದ್ದಾನೆ ದೇವ್ರು, ನಾವಿದ್ದೀವಿ ಈ ಭೂಮಿ ಮೇಲೆ
ಮತ್ತೆ ಈಗೀಗ ಅವ್ನು ಈ ಕಡೆ ನೋಡೋದೂ ಕಮ್ಮೀನೆ

ಇತ್ತೀಚಿನ ದಿನಗಳಲ್ಲಿ  ಅವನು ಯಾರಿಗೂ ಬೈಯೋದಿಲ್ಲ
ಯಾರೇನು ಮಾಡಿದ್ರೂ ತಡೆಯೋದೂ ಇಲ್ಲ
ಲೂಟಿ ಪಾಟಿ ಆಗ್ತಾ ಇದೆ , ಸಿಡಿಯುತ್ತಿವೆ ಬಾಂಬು

ಏನಾದರೂ ಆಗ್ಲಿ ನಮಗ್ಯಾಕೆ ಹೇಳಿ
ಜಗತ್ತಿನ ಚಿಂತೆಯೆಲ್ಲಾ ನಮಗೇ ಯಾಕೆ?
ಅವನಿಗೇ ದುಃಖ ಆಗ್ದಿದ್ದಾಗ ನಮಗ್ಯಾಕೆ ಆಗ್ಬೇಕು ?

 

ಮನಸ್ಸನ್ನು ತಟ್ಟುವ  ರಾಜಕಪೂರ್ ಅಭಿನಯದ ಮುಖೇಶ್ ಹಾಡಿರುವ  ಅನೇಕ ಹಿಂದಿ ಸಿನೆಮಾ ಹಾಡುಗಳಲ್ಲಿ ಇದೂ ಒಂದು . ಮೂಲ ಹಾಡನ್ನು  ಇಲ್ಲಿ ಕೇಳ್ರಿ ಮತ್ತು ನೋಡ್ರಿ. ....

(http://atulsongaday.wordpress.com/2009/05/28/aasmaan-pe-hai-khuda-aur-zameen-par-ham/)