ಪ್ರಪಂಚ ಹಿಂಗಾದರೆ ಎಂಗೆ ಸಿವಾ!
ಅವರಂದರು ನಂದು ಮೇಲು ನಿಂದೇ ಕೀಳು
ಇವರಂದರು ಇಲ್ಲಾ ನಂದೇ ಮೇಲು ನಿಂದೇ ಕೀಳು
ಅವರಂದರು ನಂದೇ ಸರಿ ನಿಂದೇ ತಪ್ಪು
ಇವರಂದರು ಇಲ್ಲಾ ನಂದೇ ಸರಿ ನಿಂದೇ ತಪ್ಪು
ಅವರಂದರು ನಮ್ಮದು ಸಕ್ರಮ ನಿಮ್ಮದು ಅಕ್ರಮ
ಇವರಂದರು ಇಲ್ಲಾ ನಮ್ಮದು ಸಕ್ರಮ ನಿಮ್ಮದು ಅಕ್ರಮ
ಎಲ್ಲಿ ನೋಡಿದರು ವಾದ ವಿವಾದ
ಪ್ರಪಂಚ ಹಿಂಗಾದರೆ ಎಂಗೆ ಸಿವಾ!
ಹೊರಗಡೆ ವಾದ ವಿವಾದ ಕೇಳಿ ಬೇಜಾರಾಗಿ, ಸುಸ್ತಾಗಿ, ದಣಿವಾಗಿ, ಸಂಪದ ದಲ್ಲಿ ಕಾಲಿಡ್ತಾಯಿದ್ದೀನಿ. ಇಲ್ಲಿ ಎಂಗೆ ಗೊತ್ತಿಲ್ಲಾ ಸಿವಾ,
ಬ್ಲಾಗ್, ಕಥೆ, ಕವನ, ಪ್ರಭಂದ, ಚರ್ಚೆ, ಛಾಯಚಿತ್ರ ಎಲ್ಲ ತಿರುವಿ ಹಾಕಿ ಮನಸಿಗೆ "ಕುಸಿ"ಯಾಗಿ ಬಲಗಾಲ್ಡಿತ್ತಾಯಿದ್ದಿನಿ ನೀನೆ ಕಾಪಾಡು ಸಿವಾ!!!
ಸಂಪದ ದಲ್ಲು ಹಿಂಗೇನಾ ಅಂತ ಅನ್ನಿಸಬ್ಯಾಡ ಸಿವಾ!!!
ಪ್ರತಿಕ್ರಿಯೆ (9)