ಮೊನ್ನೆ ಅಕ್ಟೋಬರ್ 31ರಂದು ಮುಂಬೈಯಲ್ಲಿ ವಿಕಿಪಿಡಿಯ ಆಸಕ್ತರು, ಉತ್ಸಾಹಿಗಳು,  ಕಾರ್ಯಕರ್ತರು ಕಲೆತಿದ್ದರು. ವಿಕಿಪಿಡಿಯದಸಂಸ್ಥಾಪಕ  ಜಿಮ್ಮಿ  ವೇಲ್ಸ್  ಬಂದಿದ್ದರು. ನಮ್ಮ ಸಂಪದದಸಂಸ್ಥಾಪಕರಾದ ಹರಿಪ್ರಸಾದ ನಾಡಿಗರು ಭಾರತೀಯ ಅಂಗಸಂಸ್ಥೆಯ ಪ್ರಮುಖರಲ್ಲಿ ಒಬ್ಬರೂ ಹೌದು. ಈ ಸಂಪದದ ಹಿರಿಯ ಸದಸ್ಯರೂ ಉತ್ಸಾಹಿಗಳೂ ಆದವೆಂಕಟೇಶರೂ ಪಾಲ್ಗೊಂಡಿದ್ದರು. ನಾನೂ ಇದ್ದೆನು.
ಸಂಸ್ಥಾಪಕ ಜಿಮ್ಮಿ ವೇಲ್ಸ್ ವಿಕಿಪಿಡಿಯದಉದ್ದೇಶವನ್ನು 'ಸಮಸ್ತ ಮನುಕುಲದ ಜ್ಞಾನವನ್ನು  ಪ್ರತಿಯೊಬ್ಬನಿಗೂ ಅವನ ಭಾಷೆಯಲ್ಲಿಯೇ ತಲುಪಿಸುವುದು ' ಎಂದು ತಿಳಿಸಿದರು. ಭಾರತೀಯ ಭಾಷೆಗಳಲ್ಲಿ ವಿಕಿಪಿಡಿಯದ  ಬಳಕೆ ಬಹಳ ಕಡಿಮೆಯಿದ್ದು   ಅದು ಹೆಚ್ಚಬೇಕು  ಎಂದು ತಿಳಿಸಿದರು.  ಭಾರತದ ಇಂಟರ್ನೆಟ್ ಬಳಕೆದಾರರಲ್ಲಿ  ನೂರರಲ್ಲಿ  ೮೭  ಜನಕ್ಕೆ ಭಾರತೀಯ ಭಾಷೆಗಳನ್ನು  ಕಂಪ್ಯೂಟರಿನಲ್ಲಿ  ಬಳಸುವ  ಬಗ್ಗೆ    ಅರಿವೇ ಇಲ್ಲ .  ಈ ಬಗ್ಗೆ     ಆಗಬೇಕಾದ ಕೆಲಸಗಳ ಬಗ್ಗೆ  ಚರ್ಚಿಸಿದರು. ಭಾರತೀಯ  ಭಾಷೆಗಳ  ವಿಕಿಪೀಡಿಯಗಳಲ್ಲಿ  ಮಾಹಿತಿ  ಹೆಚ್ಚಬೇಕು. ಹಿಂದಿಯಲ್ಲಿ  ಲೇಖನಗಳ  ಸಂಖ್ಯೆ  ೬೦,೦೦೦  ಇದೆ . ಕನ್ನಡದ ಸ್ಥಾನ ಆರನೇಯದೋ ಏಳನೇಯದೋ  ಇದೆ. ಸುಮಾರು  ೧೦,೦೦೦ ಕನ್ನಡ ಬರಹಗಳಿವೆ. ಸುಮಾರು ಎಪ್ಪತ್ತೇ   ಜನ  ದಿನಕ್ಕೊಂದು  ಲೇಖನ ಸೇರಿಸಿದರೂ  ಒಂದೇ  ವರುಷದಲ್ಲಿ  ಸೇರಿಸುತ್ತ  ಹೋದರೂ ಒಂದೇ ವರುಷದಲ್ಲಿ ಇಪ್ಪತ್ತು ಸಾವಿರ ಹೊಸ ಲೇಖನ ಸೇರ್ಪಡೆ ಆಗುವದು. ಹನಿ ಹನಿಗೂಡಿದರೆ ಹಳ್ಳ . ಯಾವದೇ  ವಿಷಯದ ಬಗ್ಗೆ ಪರಿಪೂರ್ಣ  ವಿಸ್ತಾರವಾದ ಮಾಹಿತಿಯೇ  ಇರಬೇಕೆಂದಿಲ್ಲ. ತಮ್ಮ  ತಮ್ಮ   ಹತ್ತಿರ ಇದ್ದಷ್ಟು ಮಾಹಿತಿ ಸೇರಿಸುತ್ತ ಹೋದರೆ   ಉಳಿದವರೂ  ಅದನ್ನು  ವಿಸ್ತರಿಸುತ್ತ ಹೋಗಬಹುದು.  ಅಲ್ಲವೇ   , ನೀತಿ , ನಿಯಮ, ಕಾರ್ಯನೀತಿಗಳು ಎಲ್ಲ ಭಾಷೆಗಳಿಗೂ ಒಂದೇ  ಇರಬೇಕೆಂದಿಲ್ಲ  ಎಂದು ಸೂಚಿಸಿದರು.
ಸುಮಾರು  ಮುನ್ನೂರು ಜನ   ಈ ಸಂವಾದದಲ್ಲಿ ಪಾಲ್ಗೊಂಡಿದ್ದರು . ಬಹುಪಾಲು ಯುವಕ ಯುವತಿಯರು ಉತ್ಸಾಹದಿಂದ  ಗಂಭೀರವಾಗಿ ಚರ್ಚೆಯಲ್ಲಿ ಭಾಗವಹಿಸಿದರು. ನಮ್ಮ  ನಾಡಿಗರು    ಸಭಾಸದರ ಜತೆ   ಸಂವಾದಕ್ಕಾಗಿ  ವೇದಿಕೆಯ ಮೇಲೆ ಇನ್ನೂ ಮೂವರ ಜತೆ   ಇದ್ದರು. ಕನ್ನಡ ವಿಕಿಪೀಡಿಯ  ಬಗೆಗೆ ತಿಳಿಸಿ   'ಕನ್ನಡ ವಿಕಿಪೀಡಿಯದ ತಂದೆ' ಎನಿಸಿಕೊಂಡರು .   ನಾನೂ  ವಿಕಿಪೀಡಿಯಾ ದಲ್ಲಿ ಬರಹಗಳನ್ನು ಸೇರಿಸುವ ಬಗ್ಗೆ  ವೆಂಕಟೇಶರಿಂದ ಅಮೂಲ್ಯ ಮಾರ್ಗದರ್ಶನ  ಪಡೆದೆ.