ಹನಿಯಾಗಿ ಉದಿರಿಹೋದ ಮೋಡವನ್ನು

ಆಕಾಶ ಮರಳಿ ಪಡದಂತೇ

ಕಳೆದುಕೊಂಡ ಆತ್ಮೀಯರನ್ನು

ಮನುಷ್ಯ ಮರುಪಡೆಯುವಂತಿದ್ದರೇ

ಎಷ್ಟು ಚೆನ್ನಾಗಿದ್ದೀತು!

ಮರೆತುಹೋದ ಹಾದಿಯಲ್ಲಿ

ಮತ್ತೇ ನದಿ ಹರಿದುಬಂದಂತೇ

ಕಳೆದುಹೋದ ಕಾಲದ ತಗ್ಗಿನಲ್ಲಿ

ವರ್ತಮಾನವನ್ನು ಸೇರಿಸುವದಾದರೋ

ಎಷ್ಟು ಛಂದ!

ಈ ದಡ

ಇಷ್ಟಬಿದ್ದೇ ಸೇರಿರುವ ಗಮ್ಯವಾಗಿದ್ದರೂ

ಅಸಂತೃಪ್ತಿಯಿಂದ ಕೈಬಿಟ್ಟು ಹೋಗುತ್ತಿರುವ

ಪ್ರತಿ ಕ್ಷಣವೂ

ನಾಚುವಹಾಗೆ

ಬಾಲ್ಯವನ್ನು ತೋರಿಸುವೆನೋ!

Origina Source: ___LINK_OPEN_ href="http://www.newaavakaaya.com/index.php?option=com_content&view=article&id=591%3Amarokkasaari&catid=40%3Aselayeru-poetry&Itemid=1"___మరొక్కసారి ..