ಅರಳುವದು ಮರೆತುಹೋದ ಮರ

ಬಣ್ಣ ಕಳೆದುಕೊಂಡ ಚಿಟ್ಟೆ

ರೆಕ್ಕೆಗಳು ಮುರಿದ ಹಕ್ಕಿ

ಮುರಿದುಬಿದ್ದ ಗಾಜಿನ ಚೂರುಗಳು

ಕಳೆದುಹೋದ ವಿಳಾಸದ

ನಿಟ್ಟುಸುರಿನ ಗುಸುಗುಸು

ಕೊನೆಯ ಹಾಳೆಯಲ್ಲಿ

ನಿಗೂಢ ರಹಸ್ಯ ಒಂದು

ನಿಶ್ಶಬ್ದವಾಗಿ ನಗುತಾಯಿದೇ!