ಸಮವಾಯೋ ಏವ ಸಾಧು - (ಹೊಂದಿಕೊಂಡು ಬದುಕುವದು- ಅದೇ ಒಳ್ಳೆಯದು) ಇದು ಅಶೋಕನ ಶಿಲಾಶಾಸನದಲ್ಲಿನ ವಾಕ್ಯ . ಸ್ವಮತವನ್ನು ಪೂಜಿಸುವದಾಗಲೀ ಪರಮತವನ್ನು ನಿಂದಿಸುವದಾಗಲೀ ಆಗಬಾರದು . ಇದೇ ಮಾತನ್ನೇ ಭಗವಾನ್ ಬುದ್ಧನೂ ಹೇಳಿದ್ದಾನೆ . ''ಅನ್ಯರಿಗೆ ಅಸಹ್ಯಪದಬೇಡ ,ತನ್ನ ಬಣ್ಣಿಸಬೇಡ, ಇದಿರ ಹಳಿಯಲು' ಬೇಡ ' ಎಂದು ಬಸವಣ್ಣನವರೂ ಹೇಳಿದ್ದಾರೆ. ಇಂತ್ಹದೇ ಮಾತನ್ನು ಬುಕ್ಕರಾಯನ ಶಾಸನದಲ್ಲಿ - ಶೈವರಿಗೂ ವೈಷ್ಣವರಿಗೂ ಇದ್ದ ಮನಸ್ತಾಪವನ್ನು ನಿವಾರಿಸುವಲ್ಲಿ ನೋಡಬಹುದು. ಇದೇ ಮಾತನ್ನು 'ರಸವೇ ಜನನ , ವಿರಸ ಮರಣ , ಸಮರಸವೇ ಜೀವನ' ಎಂಬ ಕವಿವಾಣಿಯೂ ಹೇಳುತ್ತದೆ . ಇದು ಇಂದು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಇಂದು ನಾನು ಓದಿದ 'ಮಹಾತ್ಮರ ಮರಣ' ಎಂಬ ಪುಸ್ತಕದಲ್ಲಿನ ಒಂದು ಲೇಖನದ ವಿಷಯ . ಈ ಪುಸ್ತಕವನ್ನು ಶ್ರೀ .ಜಿ. ಪಿ.ರಾಜರತ್ನಂ ಅವರು ಬರೆದಿದ್ದಾರೆ . ಒಳ್ಳೆಯ ಪುಸ್ತಕ . ನೀವೂ ಓದಿ. ಅದನ್ನು ಓದಲು ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027975" target="_blank"______LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027975" target="_blank"___ಇಲ್ಲಿ ಕ್ಲಿಕ್ಕಿಸಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!