ನಗು ಬಂದೋ ಬಾರದೆಯೋ
ನಗಲೇ ಬೇಕಾದ ಜಾಗದಲ್ಲಿ
ನಗುತ್ತಿರುವ ನವ ದಂಪತಿಗಳು,
ತಮ್ಮಿಚ್ಚೆಯಂತೆ ಅವರನ್ನು ನಿಲ್ಲಿಸಿ
ಅವರ ಭಾವಚಿತ್ರ ತೆಗೆಯುವ ಛಾಯಾಗ್ರಾಹಕರು,
ಶುಭ ಕೋರಲು ಸರದಿಯಲ್ಲಿ ನಿಂತ ಜನಗಳು,
ಶುಭ ಆಶಿಸಿ ತಮ್ಮ ಕೆಲಸ ಮುಗಿತೆಂದು
ಬೆನ್ನು ತೋರಿಸಿ ಹೊರಡುವ ಜನಗಳು
ಇವೆಲ್ಲವನ್ನು ಕಂಡು ಮೂಕವಾದ ಆಸನಾದಿ
ಸಲಕರಣೆಗಳು,ಗೋಡೆ ,ತರು ಲತೆ,ಹೂವುಗಳು.
ಇದು ರೆಸಿಪ್ಶನ್ ದಿನದ ಗುಟ್ಟು....
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!