baravanigeಬರೆಯಲೆಂದು ಕುಳಿತೆ ಹೊಸ ಕವಿತೆಯ ಸಾಲು
ಹೊಲೆದು ಹಳೆಯ ಪದಗಳನು ,

ಪೋಣಿಸ ಹೊರಟೆ ಅಕ್ಷರಗಳ ವರ್ಣ ಮಾಲೆ
ಲೇಖನಿಯ ನೀಲಿ ಶಾಯಿಯಂಬ ನೂಲಿನಲ್ಲಿ ,

ಹೊಸದೇನೋ ಹೊಡುಕುತ್ತ ಬರೆದ ಸಾಲಿನಲ್ಲಿ
ಕಂಡದ್ದು ಬರಿ ಹಳೆಯ ನೆನಪುಗಳನ್ನೇ ,

ಹೊಸತು ಹುಡುಕುತ್ತ ಹೊರಟಂತೆ
ಕಾಡುವುದು ಹಳೆಯ ನೆನಪುಗಳೇ,

ಹಳೆಯ ನೆನಪುಗಳೇ ಕಾಡುತ್ತಾ ಬರುತ್ತವೆ
ಅನುಭವ ಎಂಬ ಹೊಸ ಹೆಸರೊಂದಿಗೆ.