ಮಳೆ ಮಳೆ ಮಳೆ ಎಲ್ಲೆಲ್ಲೂ ಮಳೆ
ಈ ಮಳೆಗಾಗಿ ಎಷ್ಟು ಕಾಯಬೇಕಾಯಿತು ಇಳೆ
ಅಂತೂ ಇಂತೂ ಗಂಗವ್ವ ಧರೆಗಿಳಿದಳು
ಸ್ವಲ್ಪವಾದರೂ ಇಳೆಯ ದಾಹ ತಣಿಸಲು

ಸ್ವಲ್ಪವಾದರೂ ತಣ್ಣಗಾಯಿತು ಎನ್ನುವಾಗಲೇ
ಬಂದಳು ಜಯಮ್ಮ ಹೊಸದೆರಡು ಹಂಡೆ ಹಿಡಿದು
ಒಂದರಲ್ಲಿ 10 ಟಿ.ಎಂ.ಸಿ ನೀರು ಬೇಕಂತೆ
ಇನ್ನೊಂದರ ತುಂಬಾ ದುಡ್ಡು ಬೇಕಂತೆ

ಎಷ್ಟಾದರೂ ಕರುನಾಡಿನವರು ಉದಾರಿಗಳು
ಸರಕಾರದಲ್ಲಿರುವ ಹೈಕಮಾಂಡಿನ ಕುರಿಗಳು
ಸುಪ್ರೀಮ್ ಕೋರ್ಟ್ ಅಲ್ಲಿರುವವರೆಲ್ಲ ಕ್ರೂರಿಗಳು
ಕೇಳುವವರೇ ಇಲ್ಲ ನಮ್ಮಯ ಗೋಳು

ಎಲ್ಲೆಲ್ಲೂ ಬೀಸುತಿದ್ದ ಬಿಸಿ ಬಿಸಿ ಹವೆ,
ಸುಡುತಿದ್ದ ಬಿಸಿಲು ಆ ಭಾನುವಿನ ಕೋಪವೇ?
ಬಿಸಿಲಿಗೆ, ಬಿಸಿ ಬಿಸಿ ಹವೆಗೆ ಸತ್ತವರೆಷ್ಟು ಮಂದಿ,
ಹನಿ ನೀರಿಲ್ಲದೆ ಒಣಗಿದವರೆಷ್ಟೋ ಮಂದಿ

ನಮ್ಮ ರೈತರು ಹಾಕಿದ ಪೈರನ್ನೇ ತಿನ್ನಲಿ
ಅವಳ ಜನರೇ ಮೃಷ್ಟಾನ ಭೋಜನ ಮಾಡಲಿ
ಅವಳ ಜನರಿಗೇ ಎಲ್ಲ ಇರಲಿ ಕಾವೇರಿ ನೀರು
ಬೆಂಗಳೂರಿಗರೇ ಕುಡಿಯಿರಿ ಟ್ಯಾಂಕರ್ ನೀರು

ಸರ್ವರಿಗೂ ಸಮಪಾಲು ಬಂದರಲ್ಲವೇ ನ್ಯಾಯ
ಮಾಡುತ್ತಿರುವುದೇನು ಉಚ್ಚ ನ್ಯಾಯಾಲಯ?
ನ್ಯಾಯ ಕೊಡದ ನ್ಯಾಯಾಲಯ ಧಿಕ್ಕರಿಸಿ
ಒಗ್ಗಟ್ಟಿನಲ್ಲಿ ಬಲವಿದೆ,ಅನ್ಯಾಯದ ಪರದೆ ಸರಿಸಿ..