ಪ್ರಪಂಚದ ಹುಡುಗರೆಲ್ಲ ಖಾಲಿಯಾದರೂ
ನಿನ್ನ ಬಳಿ ಮತೊಮ್ಮೆ ಬರಲಾರೆ ಎಂದೆಯೇಕೆ ಗೆಳತಿ
ನಿನ್ನನ್ನ ಹುಚ್ಚನಂತೆ ಪ್ರೀತಿಸಿದ್ದೇ ಕಾರಣವೇ
ನಿನ್ನೀ ಕಠಿಣ ನಿರ್ಧಾರಕ್ಕೆ
ನಿನ್ನ ಒಳ್ಳೆಯ ಗುಣವೆಂದರೆ ಎಲ್ಲರನ್ನೂ
ಒಳ್ಳೆಯವರೆನ್ನುವುದು, ಒಳ್ಳೆಯದಾಗಲೆನ್ನುವುದು
ಆದರೆ ನಿನ್ನಂತೆಯೇ ಎಲ್ಲರೂ ಇರುವುದಿಲ್ಲ
ಇದೇ ಕಾರಣಕ್ಕೆ ಅಪಾತ್ರರ ಸ್ನೇಹ,ಸಲುಗೆ ಬೇಡೆಂದೆ
ನಿನ್ನ ಮನಸು ಹೂವಿನ ಪರಾಗಿಯಂತೆ ಮೃದು
ದುಂಬಿಗಳಿಗೆ ಜೇನಷ್ತ್ಱೇ ಮುಖ್ಯ ಗೆಳತಿ
ಜೀನ ಸವಿದ ಮೇಲೆ ಪರಾಗಿಯ ಚಿಂತೆಯಿರುವುದಿಲ್ಲ
ಆ ಮನಸಿಗೆ ಘಾಸಿಯಾದೀತೆಂದು ಎಚ್ಚರಿಸಿದೆನಷ್ಟೇ
ಅತಿಯಾದರೆ ಅಮೃತವೂ ವಿಷವಂತೆ ಭಾಸ
ನಿನ್ನ ಮೇಲಿನ ಅತಿ ಕಾಳಜಿಯೇ ಮುಳ್ಳಾಯಿತೆ?
ನೀ ಬಿಟ್ಟು ಇಂದಿಗೆ ಮೂರು ವರುಷ
ನನಗದೇ ಕಳೆದಂತಾಗಿದೆ ನೂರು ವರುಷ
ದುಂಬಿಯಂತೇ ಅವ ನಿನ್ನ ಹೀರಿ,ಬಿಟ್ಟು ಬಿಟ್ಟನಲ್ಲ
ನಾನು ನೆನಪಾಗದಿದ್ದರೂ ನನ್ನ ಮಾತು ನೆನಪಿಲ್ಲವೇ?
ನನ್ನೆದೆಯು ಸುಡುತಿದೆ,ತಂಗಾಳಿಯಾಗಿ ಬಾ
ನಿನಗಾಗಿ ಕಾದಿರುವೆ,ನೀ ಹೇಗಿದ್ದರೂ ಸ್ವೀಕರಿಸುವೆ..
ನಾ ಕಾಯುತಿರುವೆ...
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!