ಮಾತಾಡಿಸದೆ ನೀ ಮೌನಿಯಾದರೂ ಸರಿಯೆ,
ನಾ ನಿನ್ನ ಬಿಟ್ಟು ದೂರಕಂತೂ ಸರಿಯೆ..
ಕ್ಷಣಕೊಮ್ಮೆ ತುಡಿಯುತಿದೆ ನಿನಗಾಗಿ ಈ ಮನ,
ನನ್ನ ಪ್ರೀತಿಯ ಕಾವಿಗೆ ಕರಗದೆ ನಿನ್ನ ಮನ?
ವಿಳಾಸ ಕೇಳಿದರೇಕೆ ಅನುಮಾನಿಸುವೆ,
ನನ್ನ ಮನಸಿನ ವಿಳಾಸದಲ್ಲಿ ಸದಾ ಇರುವೆ
ಮನದ ಮೂಲೆಯಲಿ ಬೇಸರವು ಮೂಡಿದೆ
ನನ್ನ ಮೇಲೆ ನಿನಗೆ ನಂಬಿಕೆಯೇ ಬಾರದೆ?
ನೀನೆನಗೆ ಮತ್ತೆ ಸಿಗದಿದ್ದರೇನೇ ಚೆನ್ನಾಗಿತ್ತು,
ಗೊಣಗಿದೆನೊಮ್ಮೆ ಹೀಗೆ ಮನದಲೇ ಅತ್ತು.
ನಾನೇನು ನಿನ್ನಯ ತನುವನ್ನ ಬಯಸಿಲ್ಲ, ಹಳೆಯ
ಸ್ನೇಹದ ನೆನಪಿಂದ ಸಲುಗೆ ತೋರಿದೆನಷ್ಟೆ.
ನನ್ನೊಡನೆ ಸ್ನೇಹದಲಿ ನಾಲ್ಕು ಮಾತಾಡು ಸಾಕು,
ಜೊತೆಯಲ್ಲಿ ಖುಷಿಯಿಂದ ಹೆಜ್ಜೆಯಿಡಬೇಕು.
ನಲಿಯೋಣ ಸ್ನೇಹದಲಿ ಜೋಕಾಲಿ ಜೀಕಿ,
ನಡೆ ಹುಡುಗಿ ಎದೆ ಮೇಲೆ ನಿನ್ನ ನಗುವ ಬಿಸಾಕಿ..
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!