ಜಕ್ಕಣ, ಡಂಕಣರ ಬಗ್ಗೆ ಒಂದು ಪತ್ರ
ಮಾನ್ಯ
ಸಂಶೋಧಕರೇ,
ಕರುನಾಡ ಶಿಲ್ಪ ಕಲಾ ಸಾಮ್ರಾಜ್ಯ ಸಂಪದದ
ಸ್ಪೂತರ್ಿ ಸೆಲೆಯಾಗಿರುವ ಜಕಣ ಡಂಕಣರನ್ನು
ಆದ್ಯ ಶಿಲ್ಪಿ ಗಳೆಂದೇ ತಲೆ ತಲಾಂತರದಿಂದ
ಕನ್ನಡಿಗರೆದೆತುಂಬಿ ಕರೆಯುತಿಹರು
ನೆಲದ ಕಲೆ ಸಂಸ್ಕೃತಿಯ ಶಿಲೆಯೊಳರಳಿಸಿ ತೋರಿ
ಜಗಕೆ ನೀಡಿದ ಅವರ ಜನಪದರು ಕಥೆಯಾಗಿ ಹೇಳುತಿಹರು
ಇತಿಹಾಸ ಶಾಸನದಿ ಗುರುತಿಸದೆ ವಂಚಿಸಿದ
ವಂಚಕರ ಜಾಲಕ್ಕೆ ಬಲಿಯಾದ ಈ ಜನರ
ಶ್ರಮವ ಸ್ಮರಿಸದೆ ಬರಿದೇ ಅವರಿಲ್ಲ ಅನ್ನುವೊಡೆ
ಜಾನಪದ ಜಂಗಮರು ಕಥೆ ಕವನ ಕಾವ್ಯದಲಿ
ಹಾಡಿ ಹೊಗಳಿದ ಅವರ ಕಥೆ ಮಿಥ್ಯವೇನು ?
ಶಾಸನದ ಸಾಕ್ಷಿಗಳೇ ಪರಮ ಸತ್ಯವೇನು?
ಜಗದಿ ಜಕ್ಕಣ ಮತ್ತು ಡಂಕಣರ ಹೆಸರುಗಳು
ಕಲ್ಪನೆಯ ಕಥೆ ಎಂದು ಉಸುರುತಿಹ ಶೋಧ ಕರೆ
ಜಗವೆ ಕೈ ಮುಗಿಯುತಿಹ ದೇವಿ ದೇವತರೆಲ್ಲ
ಕವಿಯ ಕಲ್ಪನೆ ಕೂಸು ಅಲ್ಲವೇನು ?
ಕಲ್ಪನೆಯು ಶಿಲ್ಪದಲಿ, ಚಿತ್ರದಲಿ, ಮೂಡಿರುವುದಲ್ಲವೇನು ?
ಶಿಲ್ಪಿಗಳ ಹೆಸರಿಗಳು ಶಾಸನ ದೊಳಿರದಿರಲು
ಅವರಿಲ್ಲ ಇರಲೇಇಲ್ಲ ಎನ್ನುವುದು ಸಾದುವೇನು ?
ಹೆಸರು ಹಣ ಕೀರುತಿಯ ಲಾಲಸೆಯ ಬದಿಗೊತ್ತಿ
ಕಲೆಯ ಆರಾಧನೆಯೇ ಪರಮೋಚ್ಚ ಗುರಿ ಎಂದು
ಮನೆ ಮಡದಿ ಮಕ್ಕಳನು ಮರೆತು ತಪಗೈದಿರುವ
ಸಾವಿರದ ಶತಮಾನ ಉರುಳಿ ಹೋದರು ಜಗದಿ
ತಲೆಎತ್ತಿ ನಿಂತಿರುವ ಶಿಲ್ಪ ಸಂಪದವಿತ್ತು
ಮರೆಯಾದ ಮಹನೀಯರ ಸ್ಮರಣೆ ಗೈಯುವುದು
ಯಾರ ಕೆಲಸ ?
ಜಕ್ಕಣರ ಕುರುಹಾಗಿ ನೂರಾರು ಗುಡಿಇದ್ದು
ಕಡೆದ ಗುಡಿಗಳರೆಲೆಲ್ಲು ಹೆಸರನ್ನು ಮೂಡಿಸದೆ
ಗುರು ಪರಂಪರ ಗೆಸರು ಜಕ್ಕಣರದೆನ್ನುತಲಿ
ಶಿಷ್ಯ ಕೋಟೆಯು ಜಗದಿ ಕರೆದಿರುವುದು
ಆಚಾರ್ಯಜಕ್ಕಣರ ಹೆಸರಿಲಿ ಇರದಿರಲಿ
ಇದರಿಂದ ನಿಮಗಾಗೊ ಭಾಗ್ಯವೇನು ?
ಇದ್ದಾಗ ಸ್ಮರಿಸದೆ, ಶಾಸನವ ಬರೆಸದೆ
ಇಲ್ಲವೆಂಬುವ ಪ್ರಣವ ಮಂತ್ರವನೆ ತಾಉಸುರಿ
ಲಕ್ಷೊಪ ಲಕ್ಷಜನ ಶಿಲ್ಪಿ ಕುಲ ಸಂಪದರ
ಎದೆಯೊಳಗಿನುಸಿರಾಗಿ ಸ್ಫೂತರ್ಿಯಾಗಿಹ ಅವರ
ಹೆಸರಿನಿಂ ಶಿಲ್ಪಿ ಕುಲ ಗರಿಕೆಯ ಚಿಗುರಂತೆ ವಧರ್ಿಸಿಹುದು
ಆದ್ಯ ಗುರು ಅವರೆಂದೇ ನಂಬಿರುವುದು
ಯಾರ ಹೆಸರುಸಿದರೆ ಮನಪುಳಕಗೊಳುವುದೊ
ಯಾರ ಹೆಸರಳಿದರೆ ಮನ ಮುದುಡಿಗೊಳ್ವದೊ
ಇಲ್ಲದಿಹ ಹೆಸರನ್ನೇ ಉಸಿರಾಗಿ ಬಾವಿಸಿಹ
ಕರಕುಶಲ ಕುಶಲಿಗರ ಕುಸುಮ ಕೋಮಲ ಮನಕೆ
ನಿಮ್ಮ ಸಂಶೋಧನೆಯ ಅರ್ಧ ಸತ್ಯವನುಸಿರಿ
ನಂಬಿರುವ ಮನಸುಗಳ ಏಕೆ ನೋಯಿಸುವಿರಿ
ಇತಿಹಾಸ ಶಾಸನದ ಮಾನ್ಯ ಸಂಶೋಧಕರೆ
ಶಾಸನದ ಉಕ್ತಿಗಳು ಶಿಲ್ಪಿ ಸ್ಮರಣೆಯ ನಿಜದಿಗೈದುವೇನು ?
ಕರುನಾಡಿನದ್ಬುತದ ಗೊಮ್ಮಟನ ಮೂರುತಿಯ
ಪರ್ವತದ ಮೇಲಿರುವ ಕಗ್ಗಲ್ಲ ಬಂಡೆಯಲಿ
ಕಡೆದ ಶಿಲ್ಪಿಯ ಶ್ರಮವ ಇತಿಹಾಸ ಕಂಡಿತೇನು ?
ಅಮರ ಶಿಲ್ಪಿಯ ಹೆಸರ ಸ್ಮರಿಸಿ ಶಾನಸದಲ್ಲಿ ಬರೆಸಿತೇನು ?
ಕಾವ್ಯರಚನೆಯೊಳೆಲ್ಲಾ ಚಲುವಿನ ಹೊಗಳಿಕೆ ವಿನ:
ಶಿಲ್ಪಿ ಶ್ರಮ ಸಾರ್ಥಕ್ಯಗೊಳಿಸಲಿಲ್ಲ, ಹೆಸರ ಸ್ಮರಿಸಲಿಲ್ಲ
ಇಂತಿರುವ ಶಾಸನ, ಸಾಹಿತ್ಯ, ಸಂಹಿತೆಯು
ಕಡೆದ ಶಿಲ್ಪಿಯ ಹೆಸರು ಸಂಶೋಧನೆಯು ಕೊಡುವುದೇನು ?
ದತ್ತಿದಾನವ ಗೈದ ಜನರ ಮೂಗಿನ ನೇರ
ಇರುವ ಶಾಸನದೊಳಾವ ಶಿಲ್ಪಿಯ ಹೆಸರಿರುವುದು ?
ಆದ್ಯ ಶಿಲ್ಪಿಯ ಹೆಸರು ವೇದ್ಯವಾಗುವವೆಗೂ
ನಿಮ್ಮ ಸಂಶೋಧನೆಯು ಹೆಕ್ಕಿತೆಗೆಯುವವರೆಗೂ
ಜಕಣ ಡಂಕಣರೆಸರು ಇರುವಷ್ಟು ದಿವಸಗಳು ಇರಲಿ ಬಿಡಿ,
ಹಿಂದಾದ ಅಪಚಾರಕುಪಗಾರ ಗೈವಂತೆ
ಮಿಥ್ಯವನೆ ಸತ್ಯವೆಂದೊತ್ತೊತ್ತಿ ಹೇಳುತ್ತ
ತಪಗೈದ ತಾಪಸಿಗೆ ತಾಪವನ್ನೆಂದೆಂದೂ ಮಾಡದಿರಿ.
ಶಾಸನದೊಳಿಲ್ಲ ದಿಹಾರಾರಿಲ್ಲ ವೆನ್ನುತ್ತ
ನ್ಯಾಯ ನಿಷ್ಕಶರ್ೆಯ ತೂಗು ಕತ್ತಿಯನೆತ್ತಿ
ಜಗದೊಳಗೆ ಜಕ್ಕಣರ ಅಭಿಮಾನಿ ಬಳಗಕ್ಕೆ
ಸತ್ಯ ನಿಷ್ಟೂರತೆಯ ಕಹಿನುಡಿಯುತ್ತಾ
ತಿಳಿಗೊಳದ ತಿಳಿನೀರಿನಂತಿರುವ ಮನಸುಗಳ
ಉಕ್ತಿ ಸೂಕ್ತಗಳಿಂದ ಕಲಕಿರಾಡಿಯ ಎಂದು ಮಾಡದೆ ಇರಿ.
ಇಂತಿ ತಮ್ಮ ವಿಶ್ವಾಸಿ
ದಿನಾಂಕ : 01/01/2014
ರಚನೆ : ಎಸ್.ಪಿ. ಜಯಣ್ಣಾಚಾರ್ ಶಿಲ್ಪಿ
ಕನರ್ಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
'ಕಲಾಕುಟೀರ' ನಾರಾಯಣಪುರ ಎರಡನೇ ತಿರುವು
ಚಿಕ್ಕಮಗಳೂರು -577101,
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!