ದಿಗಿಲು ದಿಗಿಲು
ಬದುಕ ಒಡಲು .,
ಒಮ್ಮೆ ವಿಸ್ಮಯ , ಒಮ್ಮೆ ವಿಕೃತ
ನಿತ್ಯ ವಿಕ್ರಯವೆಸಗೋ
ಮಡಿಲು ..,
ಸರಸ ಬೆರೆಸಿ ,
ಮನವ ಮೆರೆಸಿ ..,
ಉಸಿರ ಸವೆಸುವ
ದೀರ್ಘ ಕಡಲು ..,
ಅಲ್ಲಿ ಜನನ ,
ಇಲ್ಲಿ ಜನನ,
ನಡುವೆ ಅಣಕಿಸೊ ,
ಸಾವ ಗಣನ ..,
ಅಲ್ಲಿ ಬೆಳಕು ,
ಇಲ್ಲಿ ಬೆಳಕು
ಸರದಿಯಂತೆ
ಕತ್ತಲ ಮೆಲುಕು ..,
ದೂರ ನಿಂತ
ರವಿಯ ಕಣ್ಣಲಿ .,
ನಿತ್ಯವಿಲ್ಲಿ ರಂಗಮಂಚ ..,
ಓಡಿ ,ಕುಂಟಿ ,ತೆವಳಿ
ಹುಗಿದು ಹೋದವು ಎಷ್ಟೋ .,, ??
ಸೀಳಿ ಬಗೆದು ತೆವಳಿ
ಜಿಗಿಯುತ್ತಿರುವವು ಅಷ್ಟೇ .., !!
ಲೆಕ್ಕಪತ್ರಕ್ಕೆ ಅವನೆ ರುಜುವು ..,
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!