37

ಕ್ಷೌರಿಕ - ನೀವು ಹಿಂದೆ ಇಲ್ಲಿ ಬಂದಿದ್ರಾ ?

ಗಿರಾಕಿ - ಇಲ್ಲ , ಈ ಗಾಯ ಯುದ್ಧದಲ್ಲಿ ಆದದ್ದು

38

(ಮಿಲಿಟರಿ ಕ್ಯಾಂಟೀನಿನಲ್ಲಿ)

- ಏನಯ್ಯಾ , ಏನು ಕುಡೀತ ಇದ್ದೀಯ ? ಚಹಾನೋ ,ಕಾಫೀನೋ

- ಅದೇನೂಂತ ಕೊಡುವಾಗ ಅವರು ಹೇಳಲಿಲ್ಲ !

-39-

- ನನ್ನ ಹೆಂಡತಿ A to Z ಅಡಿಗೆ ಮಾಡ್ತಾಳೆ

- ನೀನು ತುಂಬಾ ಲಕಿ ಕಣಯ್ಯ

- ಹೂಂ , ಅವಳು ಮಾಡೋದು ಅನ್ನ ಮತ್ತು ಝುಣಕ ಮಾತ್ರ

-40-

ಮಿಲಿಟರಿಯಲ್ಲಿ ಅಧಿಕಾರಿ ಆಜ್ಞೆ ಮಾಡಿದ - ಎಲ್ಲರೂ ಎಡಗಾಲು ಎತ್ತಿ

ಒಬ್ಬ ತಪ್ಪಿ ಬಲಗಾಲು ಎತ್ತಿ ನಿಂತ

ಅಧಿಕಾರಿ ಸಿಟ್ಟಿನಿಂದ ಕೇಳಿದ - ಯಾವನಯ್ಯ ಅವನು ಎರಡೂ ಕಾಲು ಎತ್ತಿ ನಿಂತೋನು ?