-41-

(ಹುಚ್ಚಾಸ್ಪತ್ರೆಗೆ ಫೋನ್)

-ಇತ್ತೀಚೆಗೆ ಯಾರಾದರೂ ಇಲ್ಲಿಂದ ತಪ್ಪಿಸಿಕೊಂಡಿದ್ದಾರೆಯೇ ?

-ಯಾಕೆ ?

-ನನ್ನ ಹೆಂಡತಿಯನ್ನು ಯಾರೋ ಓಡಿಸಿಕೊಂಡು ಹೋಗಿದ್ದಾರೆ.

-42-

(ಬಾರ್ ನಿಂದ ಹೊರಗಡೆ ಬಂದ ಕುಡುಕ )

- ಏಯ್ , ನನಗೆ ಒಂದು ಟ್ಯಾಕ್ಸಿ ತರಿಸು . ಮನೆಗೆ ಹೋಗಬೇಕು.

- ರೀ , ನಾನು ಯಾರು ಗೊತ್ತಾ , ವಿಮಾನಚಾಲಕ

- ಹಾಗಾದರೆ ಒಂದು ವಿಮಾನ ತರಿಸು

-43-

ಭಿಕ್ಷುಕ - ಪಕ್ಕದ ಮನೆಯವರು ಹೊಸರುಚಿ ಅಂತ ವಿಶೇಷ ತಿಂಡಿ ಕೊಟ್ಟರು. ನೀವು ಏನು ಕೊಡ್ತೀರಿ

ಮನೆಯೊಡತಿ -ಅಜೀರ್ಣಕ್ಕೆ ಔಷಧಿ !

-44-

- ನಿಮ್ಮಿಂದ ತುಂಬಾ ಉಪಕಾರವಾಯಿತು. ನಿಮ್ಮ ಉಪಕಾರವನ್ನು ಹೇಗೆ ಮರಳಿಸಬಲ್ಲೆ ?

- ಮರಳಿ ಬಾರದಿರುವ ಮೂಲಕ!!