ಸುತ್ತಲೂ ಕೆಂಪು ಬಣ್ಣದ ಚಿತ್ತಾರ
ಚೆಲ್ಲಿದೆ ಪ್ರೀತಿ ಪ್ರೇಮದ ಹುನ್ನಾರ
ಹೊಳೆಯುತಿಹಳು ಕೆಂಪು ಮಂದಾರ
ಮಾಡಿಹಳು ಚಿಟ್ಟೆಯಂತೆ ಸಿಂಗಾರ
ಕೆಂಪು ಬಲೂನು ಹಾರಾಡುತಿದೆ
ಪ್ರೇಮದಿನವು ಹತ್ತಿರ ಬರುತಿದೆ
ಪ್ರೀತಿ ಹಾಡೊಂದು ಕೇಳುತಿದೆ
ಪ್ರೇಮ ಲೋಕದಿ ಮನ ತೇಲುತಿದೆ
ಸೈಕಲ್ ಸವಾರಿಯಲಿ ಬರುತಿಹ ಬಾಲೆ
ಕಟ್ಟಿರಲು ಕೊರಳಿಗೆ ಬಿಳಿ ಮಾಲೆ
ಕೆಂಪು ವಸ್ತ್ರದಿ ಬಂದಿದೆ ಹೊಸ ಕಳೆ
ಹೊತ್ತು ತಂದಿಹಳು ಪ್ರೀತಿಯ ಸೆಲೆ
ಸುಂದರ ಚಿಟ್ಟೆಗಳ ಕಲರವದಂದದಿ
ಮಿಂಚಿದೆ ಪ್ರೇಮದರಮನೆ ಕೆಂಬಣ್ಣದಿ
ಸಾಗುವಳು ಬಾಲೆ ಪ್ರೇಮ ಪಯಣದಿ
ತನ್ನ ಇನಿಯನ ಕಾಣುವ ತವಕದಿ
-*ತೃಪ್ತಿ.ಜಿ. ಮಂಗಳೂರು*
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!