ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು. ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು, ಬೆಂದಾಗ, ಬೇಕಾದರೆ ಕವುಚಿ ಹಾಕಿ ಬೇಯಿಸಬೇಕು. ತುಪ್ಪ, ಬೆಣ್ಣೆ, ತೆಂಗಿನೆಣ್ಣೆ ಹಾಕಿ ತಿನ್ನಲು ಬಹಳ ರುಚಿ. ಸಾಂಬಾರ್, ಪಲ್ಯ, ಚಟ್ನಿ ಜೊತೆಗೂ ಉಪಯೋಗಿಸಬಹುದು.
-ರತ್ನಾ. ಕೆ.ಭಟ್, ತಲಂಜೇರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!