ಬುವಿಯು ನಮಗಿತ್ತ ಅಮೋಘ ಕೊಡುಗೆ
ಕೊಡುಗೆ ಹಸುರಿನ ಸಿರಿಯ ಉಡುಗೆ
ಉಡುಗೆ ತೊಟ್ಟಿಹ ವನರಾಣಿ ಬೆಡಗಿ
ಬೆಡಗಿ ಪ್ರಕೃತಿಯ ಮಡಿಲಲ್ಲಿ ನಡುಗಿ
ನಡುಗಿ ಸ್ವಾರ್ಥಿಗಳ ಕಣಜದಲಿ ತುಂಬಿ
ತುಂಬಿ ಕಟ್ಟಡಗಳ ಜಂಜಾಟದಲಿ ನಲುಗಿ
ನಲುಗಿ ಶುದ್ಧ ಉಸಿರಿಗಾಗಿ ತಿರುಗಿ
ತಿರುಗಿ ಸ್ವಚ್ಛ ಪರಿಸರವ ಪಡೆಯಲು
ಪಡೆಯಲು ಹೊಸ ಸಸಿಗಳ ನೆಡಲು
ನೆಡಲು ನಾವುಗಳೆಲ್ಲ ಸಹಕಾರ ನೀಡಲು
ನೀಡಲು ವಾಯು ಮಾಲಿನ್ಯ ತೊಲಗಲು
ತೊಲಗಲು ಪರಿಶ್ರಮ ಪಡಬೇಕು ನಿತ್ಯ
ನಿತ್ಯ ನೀರೆರೆದು ಪೋಷಿಸು ಮನುಜ
ಮನುಜ ಸಹಜ ಸೌಂದರ್ಯ ಕಾಪಾಡು
ಕಾಪಾಡು ಮುಂದಿನ ಪೀಳಿಗೆಗೆ ಉಳಿಸು
ಉಳಿಸು ಆಹಾರ ನೀರು ಗಾಳಿ ಬುವಿಯಲಿ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!