ಪರಿಸ್ಥಿತಿಗಳು ನಮಗೆ ಎದುರಾದಾಗ ಕೆಲವೊಂದು ವಿಚಾರಗಳು ನಮ್ಮ ಅರಿವಿಗೆ ಬರುತ್ತವೆ. ಅಲ್ಲಿಯವರೆಗೂ ನಮಗೆ ಅದು ದೊಡ್ಡ ವಿಚಾರ ಅಂತ ಅನಿಸಿರುವುದಿಲ್ಲ. ಅವತ್ತು ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸಬೇಕಿತ್ತು ಹಾಗಾಗಿ ಸರಕಾರಿ ಆಸ್ಪತ್ರೆಯ ಮುಂದೆ ಮದ್ದಿಗಾಗಿ ಕಾಯ್ತಾ ಇದ್ದೆ. ಅದು ಮದ್ದಿನಿಂದ ವಾಸಿಯಾಗೋದ್ದಲ್ಲ ಅದಕ್ಕೆ ಆಪರೇಷನ್ ಆಗಲೇಬೇಕಿತ್ತು, ಸರಕಾರಿ ಆಸ್ಪತ್ರೆಯಲ್ಲಿ ಆಪರೇಷನ್ ಗೆ ಸಂಬಂಧಪಟ್ಟ ಯಾವುದೇ ವಸ್ತುಗಳು ಇಲ್ಲ, ಮಿಷನರಿಗಳು ಇಲ್ಲ, ಡಾಕ್ಟರ್ ಇಲ್ಲ. ಹಾಗಿರುವಾಗ ಸರಕಾರ ಇದಕ್ಕೊಂದು ಹೊಸ ಯೋಜನೆ ತಂದಿದೆ. ನಮ್ಮ ಊರಿನ ಯಾವುದಾದರೂ ಖಾಸಗಿ ಆಸ್ಪತ್ರೆಯಲ್ಲಿ ನಾವು ದಾಖಲಾಗಬೇಕು, ಸರಕಾರಿಯ ವೈದ್ಯರು "ನಮ್ಮಲ್ಲಿ ಈ ವ್ಯವಸ್ಥೆ ಇಲ್ಲ, ನಿಮ್ಮ ಕಡೆಯಿಂದ ಒಂದು ಚೂರು ಸಹಾಯ ಮಾಡಿ" ಅಂತಂದ್ರೆ ಒಟ್ಟು ಮೊತ್ತದ ಒಂದಷ್ಟು ಭಾಗವನ್ನ ಸರಕಾರವೇ ನೀಡುತ್ತದೆ. ಇದು ಸಾವಿರವಾದರೂ ಸರಿ, ಲಕ್ಷವಾದರೂ ಸರಿ, ಅಜ್ಜಿಯನ್ನ ಆಸ್ಪತ್ರೆ ಸೇರಿಸಿದೆ. ಅಲ್ಲಿ ಅವರ ಆರೋಗ್ಯಕ್ಕೆ ಬೇಕಾದ ಚಿಕಿತ್ಸೆಗಳು ಆರಂಭವಾದವು. ನನ್ನ ಮನಸಲ್ಲಿ ಮೂಡಿದ ಪ್ರಶ್ನೆ ಏನಂತಂದ್ರೆ, ಸರಕಾರ ಸಾವಿರವನ್ನು ಲಕ್ಷವನ್ನು ಖಾಸಗಿ ಆಸ್ಪತ್ರೆಗೆ ಕೊಡುವಾಗ ಸರಕಾರಿ ಆಸ್ಪತ್ರೆಯಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಲ್ಲ. ಖಾಸಗಿಗೆ ಯಾವ ಕಾರಣಕ್ಕೆ ಸುರಿಯಬೇಕು. ಹಲವಾರು ಜನ ಬಡವರಿಗೆ ಮಧ್ಯಮ ವರ್ಗದವರಿಗೆ ಇದೊಂದು ವರದಾನವಲ್ಲವೇ?. ಇದನ್ನ ಯೋಚನೆ ಮಾಡುವುದಕ್ಕೆ ಸರಕಾರಕ್ಕೆ ಪುರುಸೊತ್ತಿಲ್ಲವೋ ಅಥವಾ ಯೋಚನೆ ಮಾಡದೆ ಇರೋ ಹಾಗೆ ಖಾಸಗಿಯವರೇನಾದರೂ ನಿರ್ಬಂಧ ಹೇರಿದ್ದಾರೋ ಗೊತ್ತಿಲ್ಲ. ಯಾರು ಯೋಚಿಸಿ, ಯಾರಿದನ್ನ ಅನುಷ್ಠಾನಕ್ಕೆ ತರಬೇಕು ಅರ್ಥವಾಗ್ತಾ ಇಲ್ಲ. ಅನುಭವಿಸಿದ್ದನ್ನ ದಾಟಿಸಿದ್ದೇನೆ, ನನಗಿದನ್ನ ಯಾರ ಬಳಿಗೆ ತಲುಪಿಸುವುದು ಗೊತ್ತಿಲ್ಲ. ನಿಮಗೆ ಸಾಧ್ಯವಾದರೆ ಎಲ್ಲಿಗಾದರೂ ತಲುಪಿಸಿಬಿಡಿ
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!