ಕೆಲವೊಂದು ವಿಚಾರವನ್ನ ಅರ್ಥ ಮಾಡಿಸುವುದು ಹೇಗೆ? ಅರ್ಥ ಮಾಡಿಸಲೇಬೇಕಾ? ಅರ್ಥ ಮಾಡಿಸದಿದ್ದರೆ ಅದರಿಂದೇನಾದರೂ ಸಮಸ್ಯೆ ಉಂಟಾಗಬಹುದಾ? ನಾವೇನು ಅಂದುಕೊಂಡಿರುತ್ತೇವೆ ಅನ್ನೋದು ನಾವು ಆ ಸಂದರ್ಭದಲ್ಲಿ ಇದ್ದು ಅನುಭವಿಸಿದ್ದ ಕಾರಣ ನಮಗದು ಅರ್ಥವಾಗಿರುತ್ತದೆ. ಎದುರಿನವನಿಗೆ ಎಷ್ಟೇ ಜತನದಿಂದ ಸಂದರ್ಭ ಸಹಿತ ವಿವರಿಸಿದರೂ ಸಹ ಆತ ಸನ್ನಿವೇಶದಲ್ಲಿ ಬದುಕಿರದ ಕಾರಣ ಅವನಿಗೆ ಒಂದಷ್ಟು ಪ್ರಮಾಣ ಮಾತ್ರ ಅರ್ಥವಾಗಬಹುದು .ಅಥವಾ ನಾವು ಯೋಚಿಸಿದ ಅರ್ಥಕ್ಕಿಂತ ವಿಭಿನ್ನವಾಗಿ ಆತ ಅದನ್ನ ಅರ್ಥೈಸಿಕೊಳ್ಳಬಹುದು ,ನಾವು ಒಳ್ಳೆಯ ಅರ್ಥದಲ್ಲಿ ಮಾತನಾಡಿದ್ದನ್ನ ಆತ ಕೆಟ್ಟ ಅರ್ಥದಲ್ಲಿ ಯೋಚಿಸಬಹುದು, ನಾವೊಂದು ಕೀಳು ವಿಚಾರವನ್ನು ಆತ ಅದ್ಬುತ ಅಂದುಕೊಳ್ಳಬಹುದು. ಕೇಳುವ ವಿಚಾರ ನಮ್ಮ ಮನಸಲ್ಲಿ ಓಡುತ್ತಿರುವ ಆಲೋಚನೆ ಎದುರಿನವನ ಮನಸ್ಸಿನಲ್ಲೂ ಓಡುತ್ತಿದ್ದರೆ ವಿಚಾರಗಳು ವಿನಿಮಯವಾಗುತ್ತದೆ. ಇಲ್ಲವಾದರೆ ಅರ್ಥವಾದಂತೆ ನಟಿಸಿ ಬದುಕುವವರ ನಡುವೆ ಅರ್ಥವಾಗಿದಿಯೋ ಇಲ್ಲವೋ ಅಂತ ಕಂಡುಹಿಡಿಯೋದಕ್ಕೆ ನಮ್ಮಲ್ಲಿ ಯಾವುದೇ ಮಾಧ್ಯಮ ಇಲ್ಲ. ಆದರೆ ನನಗೀಗ ಸದ್ಯಕ್ ಬೇಕಾಗಿರೋದು ಒಂದು ನಿಖರ ರೂಪ. ನಾವು ಅರ್ಥ ಮಾಡಿಸುವುದರಲ್ಲೂ ಸೋತಿದ್ದೇವೆ, ಅರ್ಥ ಮಾಡಿಕೊಳ್ಳುವುದರಲ್ಲೂ ಸೋತಿದ್ದೇವೆ. ಒಂದಷ್ಟು ತಿಳಿದುಕೊಳ್ಳಬೇಕಾಗಿದೆ ಇವೆರಡು ಘಟನೆಗಳು ನಮ್ಮ ಜೀವನದಲ್ಲಿ ಸರಿಯಾಗಿ ನಡಿತಾ ಇದ್ದಾವೆ ಅಂತ ಅಂದ್ರೆ ತುಂಬಾ ಸಮಸ್ಯೆಗಳು ತುಂಬಾ ಜಗಳಗಳು ಸಿಟ್ಟು ದ್ವೇಷಗಳು ಎಲ್ಲವೂ ಮಾಯವಾಗಿ ಬಿಡುತ್ತವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ