ಅಲೆದು ಕಾಳನುಡಿಕಿ ಬಂದ

ಹೊಳೆವ ಬೂದು ಕಂಠದಲ್ಲಿ

ಬಳಗದಲ್ಲಿ ಬರುವ ಕಾಗೆ ಕಪ್ಪು ಬಣ್ಣವು

ಕೊಳವು ತುಂಬಿ ಸುರಿದ ಮಳೆಗೆ 

ನೆಲದ ಪಚ್ಛೆ ಪೈರು ನಡುವೆ 

ನಳವು ಹೊಡೆದು ಹರಿದ ನೀರು ದಣಿವ ನೀಗಿತು  

. 

ಊರು ಕೇರಿಯೆಲ್ಲ ಸುತ್ತಿ 

ದೂರ ಸಾಗಿ ವೇಗದಲ್ಲಿ   

ಹಾರಿ ಬಂದು ಗೂಡನೆಂದು ಮರೆತು ಕೊರಗದು 

ತೀರದಲ್ಲಿ ಮಿನ ಹಿಡಿದು 

ಸೂರಿನಲ್ಲಿ ಮರಿಗೆ ಕೊಟ್ಟು 

ಬಾರಿ ಹೆಮ್ಮೆಯಿಂದ ಕೂಗಿ ನಲಿದು ಕುಣಿವುದು 

. 

ಅಂತೆ ಕಂತೆಯೇನೆಯಿರಲಿ 

ದಂತ ಕತೆಯ ಹಿರಿಯ ನುಡಿದ   

ಚಿಂತೆಯಿರದು ತಿಥಿಯ ದಿವಸ ಬರಲು ವಾಯಸ 

ಪಂತ ಬೇಡ ಮನುಜ ಸ್ನೇಹಿ

ನಿಂತು ನುಡಿವೆ ವೈರಿಯಲ್ಲ 

ಸಂತ ಕೂಡ ಮೆಚ್ಚಿಕೊಂಡ ಶನಿಯ ವಾಹನ 

. 

ಕಾ ವಿ ರಮೇಶ್ ಕುಮಾರ್