ಒಳಗಿನ ಅಂತ:ಸತ್ವ ಬೆಳಗಿದರು
ಮಹಾನ್ ಮೇಧಾವಿ ಸಂತರಿವರು
ಜಾತಿಯ ಮೂಲ ಕೆಣಕದೆ
ಒಳಗಣ್ಣ ತೆರಯಿರೆಂದರು
ಶ್ರೀನಾರಾಯಣ ಗುರುಗಳ ತತ್ವ
ದಿನಕರನ ಪ್ರಖರ ಕಿರಣದಂತೆ ಗೋಚರ
ದಯೆ ಕರುಣೆ ಕ್ಷಮೆ ಮೈತ್ರಿಗಳ ಸಂಗಮ
ಹೃದಯ ಕವಾಟದಲ್ಲಿ ನೆಲೆಯೂರಿದ ಚಂದ್ರಮ
ಅಹಂಕಾರ ದರ್ಪವನು ಮೆಟ್ಟಿ ನಿಂತರು
ನೈತಿಕತೆಯ ಸೋಪಾನ ಹಾಕಿ ಕೊಟ್ಟರು
ಜನಪರ ಕಾಳಜಿಯ ಬಿತ್ತಿದರು
ಅದ್ವೈತ ತತ್ವವನು ಪ್ರತಿಪಾದಿಸಿದರು
ಪ್ರಕೃತಿಯೇ ನಮ್ಮ ಬದುಕಿನ ಅಂಗಳ
ಪವಾಡ ಬೇಡ ಪರಿಶ್ರಮವೇ ಆಡೊಂಬಲ
ವಿದ್ಯೆ ಸಂಪತ್ತು ಸಂಘಟನೆ ಒಗ್ಗಟ್ಟು
ನಮ್ಮೆಲ್ಲರ ಒಳಿತಿಗಾಗಿ ಮಾಡದಿರಿ ಬಿಕ್ಕಟ್ಟು
ದೇವರೊಬ್ಬನೇ ಭೇದಭಾವ ತೊರೆಯಿರಿ
ಬಾಲ್ಯವಿವಾಹ ಅನಿಷ್ಟ ಪದ್ಧತಿ ನಡೆಸದಿರಿ
ಸಾಮಾಜಿಕ ತಾರತಮ್ಯ ಕಿತ್ತೊಗೆಯಿರಿ
ಸಂಕುಚಿತ ಮನೋಭಾವ ಬದಿಗೊತ್ತಿರಿ
ಧಾರ್ಮಿಕ ಪರಿವರ್ತನೆಯ ಮೇರುಪರ್ವತವಾದಿರಿ
ಶಿಕ್ಷಣದಿಂದ ಸ್ವಾವಲಂಬನೆ ಸಾರಿದಿರಿ
ದೇಶ ಸೇವೆಯೇ ಈಶ ಸೇವೆಯೆಂದಿರಿ
ತಮಗಿದೋ ನಮ್ಮೆಲ್ಲರ ನಮನ ನಮನ
(ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಸಲುವಾಗಿ...)
-ರತ್ನಾ ಕೆ ಭಟ್,ತಲಂಜೇರಿ
(ಆಕರ:ವಿವಿಧ ಮೂಲಗಳಿಂದ)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!