ಮೋತಿಲಾಲ್ ನೆಹರು ಸ್ವರೂಪರಾಣಿಯವರ ಕುಡಿಯಾದೆ
ಶ್ರೀಮಂತ ಐಷಾರಾಮಿ ಬದುಕಿಗೆ ಆಕರ್ಷಿತನಾದೆ
ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದೆ
ಭವ್ಯ ನವ್ಯ ದೇಶ ಕಟ್ಟುವ ಕನಸ ಹೆಣೆದೆ
ಗೌರವ ಆನರ್ಸ್ ಪದವಿ ಪಡೆದೆ
ವಕೀಲಿ ವೃತ್ತಿಯಲಿ ಅನುಭವ ಗಳಿಸಿದೆ
ಅನಿಬೆಸೆಂಟ್ ತಿಲಕರ ಮಾತಿಗೆ ಸೆರೆಯಾದೆ
ಸ್ವಾತಂತ್ರ್ಯ ಚಳವಳಿಯಲಿ ಧುಮುಕಿದೆ
ಬಾಪೂಜಿಯವರ ಅಹಿಂಸಾತತ್ವಕ್ಕೆ ಆಕರ್ಷಿತನಾದೆ
ಸಮಾಜವಾದ ಜಾತ್ಯಾತೀತ ಸಂದೇಶಗಳ ಸ್ವೀಕರಿಸಿದೆ
ಕಮಲಾಕೌಲ್ ಕೈಹಿಡಿದು ಮೆರೆಸಿದೆ
ಇಂದಿರಾ ಪ್ರಿಯ ಕುವರಿಯ ಪಡೆದು ಧನ್ಯನಾದೆ
ಶ್ರೇಷ್ಠ ಮಾನವತಾವಾದಿ ಕವಿ ಕೃತಿಕಾರನಾದೆ
ಸೆರೆಮನೆವಾಸಗಳ ಅನುಭವಿಸಿ ನೊಂದೆ
ಭಾರತದರ್ಶನ, ಮಗಳಿಗೆ ಪತ್ರ ಬರೆದು ಪ್ರಸಿದ್ಧಿಯಾದೆ
ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷನಾದೆ
ಜವಹರಲಾಲ್ ನೆಹರು ದೇಶದ ನವಶಿಲ್ಪಿಯಾದೆ
ಪಂಚವಾರ್ಷಿಕ ಯೋಜನೆಗಳ ಜಾರಿಗೆ ತಂದೆ
ಮಕ್ಕಳೇ ಜಗ ಬೆಳಗುವ ಹೂಗಳೆಂದೆ
ಕಂದರ ಪ್ರೀತಿಯ ಚಾಚಾ ನೆಹರು ಎನಿಸಿದೆ
-ರತ್ನಾ ಕೆ ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!