ಹೂವು ಮಾರುತ್ತಾಳೆ. ತನ್ನ ಅಂಗಳದಲ್ಲಿ ಬೆಳೆದ ವಿವಿಧ ಹೂವುಗಳನ್ನ ತಂದು ಮಾಲೆಯಾಗಿ ಮಾಡಿ ದೇವಾಲಯದ ಮುಂದೆ ಕುಳಿತು ಹೂವನ್ನು ಮಾರುತ್ತಾಳೆ. ದಿನವೂ ಭಗವಂತನಲ್ಲಿ ಬೇಡಿಕೊಳ್ಳುವುದಿಷ್ಟೇ ಗಿಡಗಳು ಚೆನ್ನಾಗಿ ಬೆಳೆದು ಸುಗಂಧ ಬೀರುವ ಹೂವುಗಳು ಪ್ರತಿದಿನವೂ ಸಿಗುತ್ತಿರಲಿ. ನಿನ್ನ ಕೊರಳಿಗರ್ಪಿಸುವ ಭಕ್ತರು ಹೆಚ್ಚು ಹೆಚ್ಚು ಬರಲಿ ಅನ್ನುವುದು ಅಷ್ಟೇ. ಭಗವಂತನು ಗಿಡದಲ್ಲಿ ಅರಳುವ ಹೂವಿನಂತಹ ಪುಟ್ಟ ಮಗುವನ್ನು ನೀಡಿದ್ದಾನೆ. ಆಕೆಯನ್ನ ಜತನದಿಂದ ಕಾಪಾಡಿ ಬದುಕಿನ ಎಲ್ಲಾ ಆಸೆಗಳನ್ನು ಆಕೆಗೆ ನೀಡಬೇಕು ಎನ್ನುವುದಷ್ಟೇ ಇವಳ ಆಸೆ. ಪುಟ್ಟ ಮಗು ಮನೆಯಲ್ಲಿ ನೋಡಿಕೊಳ್ಳುವವರಿಲ್ಲ. ಗಂಡನು ದುಡಿಯಬೇಕು. ಕನಸುಗಳು ದೊಡ್ಡದಿವೆ. ಹಾಗಾಗಿ ಆಕೆಯು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾಳೆ. ಹೂವು ಮಾರುವಾಗ ತನ್ನ ಪುಟ್ಟ ಮಗಳನ್ನು ಎದೆಗಪ್ಪಿಕೊಂಡು ಬಿಸಿಲಿಗೆ ಆಕೆಯ ತಲೆಯ ಮೇಲೆ ತುಂಡು ಬಟ್ಟೆಯನ್ನು ಹಾಕಿ ಬಂದವರೆಲ್ಲರ ಬಳಿ ಹೂವಿಗಾಗಿ ಬೇಡುತ್ತಾಳೆ. ಒಂದು ದಿನವು ಆಕೆ ಕೊಂಡುಹೋದ ಹೂವನ್ನ ಹಾಗೆಯೇ ತಂದವಳಲ್ಲ. ಭಗವಂತನ ಮೇಲೆ ಆಕೆಗೆ ನಂಬಿಕೆ ಇದೆ. ಬೆಳಗ್ಗೆ ಅರಳಿ ಸಂಜೆ ಬಾಡುವ ಹೂವು ಇವಳ ಬದುಕನ್ನ ಅರಳಿಸುವುದಕ್ಕೆ ಕಾಯುತ್ತಿದೆ. ಅವಳ ಮಡಿಲಿನಲ್ಲಿ ಮಲಗಿರುವ ಮಗುವು ತನ್ನ ತಾಯಿಯ ಕನಸುಗಳಿಗೆ ನೀರೆರೆದು ಪೋಷಿಸಿ ಆಕೆಯನ್ನ ಜಗತ್ತಿನ ತುಂಬಾ ಪರಿಚಯಿಸಲು ದಿನಗಳಿಗೆ ಕಾಯುತ್ತಿದೆ. ಭಗವಂತ ತಥಾಸ್ತು ಎನ್ನುವುದನ್ನು ಮೊದಲೇ ನೀಡಿದ್ದಾನೆ. ಕಾಲಕ್ಕೆ ಮಾತ್ರ ಅವರು ಕಾಯುತ್ತಿದ್ದಾರೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!