ಉಷೆಯು ನಗುವಲಿ

ನಿಶೆಯ ಸರಿಸುತ

ಹಸಿರು ವನಸಿರಿ ಚೆಲುವಲಿ

ಮಿಸುಪ ಕಾಂತಿಗೆ

ಬೆಸನ ಬಯಸುತ

ಧಿಷಣ ಕುಶಲದ ನೆಪದಲಿ

ಒಂಟಿ ಪಯಣದೆ

ಜಂಟಿಯಾಗವೆ

ತುಂಟತನವನು ತೋರೆನು

ತಂಟೆ ಮಾಡದೆ

ನಂಟು ಬಯಸುತ

ನೆಂಟನಾಗುವ ಕೋರಿಕೆ

ಮುನ್ನ ಮನ್ನಿಸು

ಬೆನ್ನ ಹತ್ತಿದೆ

ಕೆನ್ನೆ ರಂಗಿಗೆ ಸೋತೆನು

ನಿನ್ನ ಕಾಲ್ಗಳ

ಹೊನ್ನ ಗೆಜ್ಜೆಯ

ಚೆನ್ನ ನಾದವು ಘಲಿರಲಿ



ಯಾವ ರಾಗದೆ

ಭಾವ ತುಂಬುತ

ಜೀವ ವೀಣೆಯ ಮಿಡಿಸಲಿ

ನಾವೆ ಪಯಣದೆ

ನೀವು ಬೆರೆತರೆ

ನೋವ ಮರೆಯುತ ನಲಿಯುವ

(ಜಲ ಷಟ್ಪದಿ ಕವನ)

ಬೆಸನ = ಅಪ್ಪಣೆ ಧಿಷಣ = ಪ್ರತಿಭಾವಂತ

-ಕಾ ವಿ ರಮೇಶ್ ಕುಮಾರ್