ಹರೆಯದಲಿ ಸವಿಜೇನು ತುಂಬಿದ್ದ ಸಮಯದಲಿ
ಬೆಳಕಿಲ್ಲದೇ ಬೆಳೆದೆ ಹಳೆಯ ನೆನಪೇ
ಕಂತಿರುವ ಸಮಯಲಿ ಎಲ್ಲ ಸಿಗುತಲೆ ಇರಲು
ಬಹು ಆಸೆ ಕಳೆದೋಯ್ತು ಹಳೆಯ ನೆನಪೇ
ಜೀವನದಿ ಉತ್ಸಾಹ ಮತ್ತೆ ಚಿಮ್ಮುತ ಬರಲು
ಶಕ್ತಿ ಕುಂದಿಹುದಿಲ್ಲಿ ಹಳೆಯ ನೆನಪೇ
ಬಾಳೆಲೆಯನು ಹಾಕಿ ಸವಿಯುಂಡ ಗಳಿಗೆಯದು
ಮರೆತು ಹೋಗದು ಎಂದೂ ಹಳೆಯ ನೆನಪೇ
ಹೊಸ ಬದುಕ ಕಟ್ಟಿದೆನು ಸತಿಯ ಜೊತೆಗೂಡಿ
ನೋವ ಮೆಟ್ಟಿಲ ಮೇಲೆ ಹಳೆಯ ನೆನಪೇ
ಕಸವಿರುವ ಕತೆಗಳನು ಗುಡಿಸಿ ಸ್ವಚ್ಛವ ಮಾಡೆ
ಖುಷಿಯ ಕೊಟ್ಟಿಹ ದಿನವೂ ಹಳೆಯ ನೆನಪೇ
ಜೊತೆಗೂಡಿ ಎಲ್ಲರೊಳು ಬೆರೆತಿರುವ ದಿನಗಳವು
ಮರುಕಳಿಸುವಾ ಹೊತ್ತು ಹಳೆಯ ನೆನಪೇ
ಹಿತವಾದ ಭಾವದೊಳು ಮುನ್ನುಗ್ಗಿ ನಡೆಯುತಿರು
ಹೊಸ ಬಾಳಿಗೇ ನಾಂದಿ ಹಳೆಯ ನೆನಪೇ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!