ಕಡಲೆ ಕಾಯಿ ಬೀಜವನ್ನು ತರಿತರಿಯಾಗಿ ಹುಡಿ ಮಾಡಿ. ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಹಸಿ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ತುರಿ, ಎಳ್ಳು, ಉಪ್ಪು, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿದ ಹಿಟ್ಟಿನಿಂದ ಅಡಿಕೆ ಗಾತ್ರದ ಉಂಡೆ ತೆಗೆದು ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಮದ್ದೂರು ವಡೆ ತಯಾರು. ಕಾಯಿ ಚಟ್ನಿ ಇಲ್ಲವೆ ಟೊಮೆಟೋ ಸಾಸ್ ಜೊತೆ ತಿನ್ನಲು ರುಚಿಕರ.