ಬ್ರೆಡ್ ಸ್ಲೈಸ್ (ಹಾಳೆ) ಗಳನ್ನು ಟೋಸ್ಟರಲ್ಲಿ ಹಾಕಿ ಹದವಾಗಿ ಟೋಸ್ಟ್ ಮಾಡಿಕೊಳ್ಳಿ. 'ಅವನ್ ಬಿಸಿ ಮಾಡಲು ಇಡಿ. ಒಂದು ಬೋಗುಣಿಯಲ್ಲಿ ಮೊಝರಲ್ಲಾ ಚೀಸ್, ಹಸುರುಮೆಣಸಿನಕಾಯಿ, ಕರಿಮೆಣಸುಪುಡಿ, ಕೊತ್ತಂಬರಿಸೊಪ್ಪು, ಟೊಮೇಟೋ, ಬೆಳ್ಳುಳ್ಳಿ, ಉಪ್ಪು ಮತ್ತು ಆಲಿವ್ ಎಣ್ಣೆ ಎಲ್ಲಾ ಸೇರಿಸಿ ಚೆನ್ನಾಗಿ ಬೆರೆಸಿ.
ಟೋಸ್ಟ್ ಮೇಲೆ ತಯಾರಿಸಿದ ಮಿಶ್ರಣವನ್ನು ಹದವಾಗಿ ಹರಡಿರಿ. ಅವನ್ ಟ್ರೇ ಮೇಲೆ ಅಲ್ಯುಮಿನಿಯಂ ಫಾಯಿಲ್ ಬಿಡಿಸಿರಿ. ತಯಾರಿಸಿದ ಟೋಸ್ಟ್ಗಳನ್ನು ಜೋಡಿಸಿರಿ. ಬಿಸಿ ಅವನ್ನೊಳಗೆ ಎರಡು-ಮೂರು ನಿಮಿಷ ಕಾಯಿಸಿರಿ. ಬಿಸಿಬಿಸಿ ಬ್ರೆಡ್ ಚಿಲ್ಲಿ ಚೀಸ್ ಟೋಸ್ಟ್ ರೆಡಿ.
(ಸಂ)