ಒಂದು ಗೋಲಾಕಾರದ ಬೋಗುಣಿಯನ್ನು ಅಚ್ಚಿನಂತೆ ಉಪಯೋಗಿಸಿ, ಬ್ರೆಡ್ ಸ್ಲೈಸ್ ಗಳನ್ನು ಗೋಲಾಕಾರಕ್ಕೆ ಕತ್ತರಿಸಿ ಬದಿಗಿಡಿ. ಇನ್ನೊಂದು ಬೋಗುಣಿಯಲ್ಲಿ ತುರಿದ ಒಣಕೊಬ್ಬರಿ, ಹಸುರುಮೆಣಸಿನಕಾಯಿ, ಒಣದ್ರಾಕ್ಷಿ, ಬಾದಾಮಿ ಮತ್ತು ಗೇರುಬೀಜದ ಚೂರುಗಳು ಹಾಗೂ ಹೆಚ್ಚಿದ ಕೊತ್ತಂಬರಿಸೊಪ್ಪು ಹಾಗೂ ರುಚಿಗೆ ತಕ್ಕಂತೆ ಉಪ್ಪು ಎಲ್ಲವನ್ನೂ ಬೆರೆಸಿ ಬದಿಗಿಡಿ. ಕತ್ತರಿಸಿಟ್ಟ ಬ್ರೆಡ್ ಸ್ಲೈಸ್ ಮೇಲೆ ಚಮಚದಿಂದ ಸ್ವಲ್ಪ ಹಾಲು ಚಿಮುಕಿಸಿ. ಮೇಲಿನಿಂದ ತಯಾರಿಸಿದ ಮಿಶ್ರಣವನ್ನು ಹಾಕಿ ಮಡಚಿ ಎರಡೂ ಅಂಗೈ ಮಧ್ಯೆ ಇಟ್ಟು ಗೋಲಾಕಾರಕ್ಕೆ ತನ್ನಿ. ಎರಡೂ ಬದಿ ಕೆಂಪಾಗುವಂತೆ ಹುರಿಯಿರಿ. ಪ್ಲೇಟಿನ ಮೇಲೆ ತಯಾರಿಸಿದ ಎರಡು ಬ್ರೆಡ್ ವಡೆ ಇರಿಸಿರಿ.
ಮೊಸರನ್ನು ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಗೊಟಾಯಿಸಿ. ವಡಾ ಮೇಲೆ ಚೆನ್ನಾಗಿ ಸುರಿಯಿರಿ. ಮೇಲಿನಿಂದ ಸಿಹಿ-ಹುಳಿ ಚಟ್ಟಿ ಹರಡಿರಿ (ರುಚಿಗೆ ಅನುಸಾರವಾಗಿ). ಜೀರಿಗೆಪುಡಿ ಮತ್ತು ಮೆಣಸಿನಪುಡಿ ಸ್ವಲ್ಪ ಚಿಮುಕಿಸಿ. ಕೂಡಲೇ ತಿನ್ನಲು ಪ್ರಾರಂಭಿಸಿ.
(ಸಂಗ್ರಹ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!