ಬೇಯಿಸಿದ ಬಟಾಟೆ, ಬೀನ್ಸ್, ಕ್ಯಾರೆಟ್, ಕಾಮಕಸ್ತೂರಿ ಎಲೆ, ಉಪ್ಪು, ಕರಿಮೆಣಸಿನಪುಡಿ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ ಮೂರು ಕಟ್ಲೆಟ್ ತಯಾರಿಸಿ. ಕಾರ್ನ್‌ ಫ್ಲೋರ್‌ ಗೆ ಸ್ವಲ್ಪ ನೀರು ಬೆರೆಸಿ ದೋಸೆಹಿಟ್ಟಿನ ಹದಕ್ಕೆ ಪೇಸ್ಟ್ ತಯಾರಿಸಿ.

ತಯಾರಿಸಿಟ್ಟ ಕಟ್ಲೇಟ್ ಅನ್ನು ಕಾರ್ನ್‌ ಫ್ಲೋರ್ ಪೇಸ್ಟಲ್ಲಿ ಮುಳುಗಿಸಿ ತೆಗೆದು ಕಾರ್ನ್ ಪ್ಲೇಕಿನಲ್ಲಿ ಹೊರಳಿಸಿ ತೆಗೆದು ಬಿಸಿ ಎಣ್ಣೆಯಲ್ಲಿ ಕೆಂಪಾಗಿ ಕರಿದು ತೆಗೆಯಿರಿ. ಅವನ್‌ ನನ್ನು ಬಿಸಿ ಮಾಡಿರಿ. ಬನ್‌ಗಳನ್ನು ಎರಡು ಭಾಗ ಮಾಡಿ. ಬೆಣ್ಣೆ ಸವರಿ ಅವನ್‌ನಲ್ಲಿ ಐದು ನಿಮಿಷ ಇರಿಸಿ ಹೊರತೆಗೆಯಿರಿ.

ಒಂದು ಬನ್ ಹಾಳೆಯ ಮೇಲೆ ಟೊಮೇಟೋ ಕೆಚಪ್ ಹರಡಿರಿ. ಮೇಲಿನಿಂದ ಒಂದು ಕಟೈಟ್ ಇರಿಸಿ, ಅದರ ಮೇಲೆ ಚೀಸ್ ಹಾಳೆ ಇಡಿ. ಅದರ ಮೇಲೆ ಇನ್ನೊಂದು ಬರ್ಗರ್ ಹಾಳೆ ಇರಿಸಿರಿ. ಬಿಸಿಬಿಸಿಯಾಗಿ ಸವಿಯಿರಿ.

(ಸಂಗ್ರಹ)