ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನೀರುಳ್ಳಿಯನ್ನು ಚೆನ್ನಾಗಿ ಬಾಡಿಸಿಕೊಳ್ಳಿ. ಬಳಿಕ ಮೆಣಸಿನ ಹುಡಿ, ಕೊತ್ತಂಬರಿ ಹುಡಿ ಹಾಗೂ ಅರಸಿನ ಹುಡಿ ಸೇರಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಹುಣಸೆ ರಸ ಸೇರಿಸಿ ಎರಡು ನಿಮಿಷ ಹುರಿಯಿರಿ. ಬೇಯಿಸಿದ ಮಶ್ರೂಮ್ ಸೇರಿಸಿ ಸಣ್ಣ ಉರಿಯಲ್ಲಿ ಐದು ನಿಮಿಷ ಕುದಿಸಿ. ಉರಿ ಆರಿಸಿ ತಣಿಯಲು ಬಿಡಿ.
ಆವನ್ ಬಿಸಿ ಮಾಡಲು ಇಡಿ. ಬ್ರೆಡ್ ಹಾಳೆಗಳನ್ನು ಟೋಸ್ಟರ್ ನಲ್ಲಿ ಹಾಕಿ ಟೋಸ್ಟ್ ಮಾಡಿ. ತಯಾರಿಸಿಟ್ಟ ಮಶ್ರೂಮ್ ಮಿಶ್ರಣವನ್ನು ಟೋಸ್ಟ್ ಮೇಲೆ ಹರಡಿರಿ. ತುರಿದಿಟ್ಟ ಮೊಝರಲ್ಲಾ ಚೀಸನ್ನು ಮೇಲಿನಿಂದ ಅಲಂಕರಿಸಿ, ಬಿಸಿಯಾದ ಆವನ್ ನಲ್ಲಿ ಐದು ನಿಮಿಷ ಇಡಿ. ಬಿಸಿ ಬಿಸಿ ತಿನ್ನಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!