ಬರಹಗಾರರು ಬರೆದದ್ದೆಲ್ಲ ಸಾಹಿತ್ಯವೇನಲ್ಲ

ನಾವುಗಳು ಹೋದದ್ದೆಲ್ಲ ದಾರಿಯೇನಲ್ಲ

 

ಕನಸುಗಳೆಲ್ಲ ನಮ್ಮೊಳಗಿನ ಬದುಕೇನು

ಅಹಂನವರು ಹೇಳಿದ್ದೆಲ್ಲ ವೇದವೇನಲ್ಲ

 

ಹೊಸಬರನ್ನು ಅಳೆಯದೇ ಪ್ರೋತ್ಸಾಹಿಸಿ

ಮರಗಿಡಗಳು ಕೊಟ್ಟದ್ದೆಲ್ಲ ಹಣ್ಣುಗಳೇನಲ್ಲ

 

ಬುರುಡೆ ಬಿಡುವವರನ್ನು ದೂರವಿಡಿರೊ

ಹತ್ತಿರದಲ್ಲಿದ್ದು ಬೈದದ್ದೆಲ್ಲ ವಿರೋಧದಿಂದೇನಲ್ಲ

 

ಈಶನಲ್ಲಿರುವ ಪ್ರತಿಭೆಗೆ ಬೆಲೆಯಿದೆಯೇನು

ಜಾಣರೂ ಕಿವುಡರಾಗಿದ್ದೆಲ್ಲ ಸ್ವಂತದಂತೇನಲ್ಲ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ