ಹುಳಿಯ ಮೇಲಾರದ ರೀತಿಯಂತಿರಲಿ ಜೀವನ
ಸವಿಯ ಹಣ್ಣುಗಳ ರುಚಿಯಂತಿರಲಿ ಜೀವನ
ತುಳುವ ಹಲಸಿನಂತೆ ಬದುಕಿಂದು ಆಗಬೇಕೇ
ಮಾವಿನ ಒಳಗಿನ ಸವಿಯಂತಿರಲಿ ಜೀವನ
ಸಾಂಬಾರಿನ ಪದಾರ್ಥದಂತೆಯೆ ಒಲವಿರಲಿ
ನೀರುಳ್ಳಿ ಬಜೆಯ ಪರಿಮಳದಂತಿರಲಿ ಜೀವನ
ಕೋಸಂಬರಿಗೆ ಹಾಕಿದ ಕೊತ್ತಂಬರಿಯಂತೆ ಚೆಲುವು
ಮಸಾಲೆ ದೋಸೆಯಲ್ಲಿನ ಗುಣದಂತಿರಲಿ ಜೀವನ
ಹೆಸರಿನ ಪಾಯಸದಂತೆಯೆ ಮನಸದುವು ಈಶಾ
ಅವಿಲಿನಂತೇ ಇರುವ ಗೆಲುವಿನಂತಿರಲಿ ಜೀವನ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!