ಅತಿಯಾದ ಗೌರವ 

ಕೊಡಬಾರದು ತೆಗೆದುಕೊಳ್ಳಲೂ 

ಬಾರದು

ಮತಿಯಿದುವೆ ಎನ್ನುವ 

ನಡೆಯಲ್ಲೇ ನಡೆಯುತ್ತಿರಬೇಕು

*

ನೇರ ದಿಟ್ಟ ನಿರಂತರದಲ್ಲಿ 

ಸಾಗುವವಗೆ ಸಮಾಜವೇ 

ಮುಳ್ಳಿನ ಹಾಸಿಗೆ 

ಕಬ್ಬಿಣದ ಸರಪಳಿಗಳು 

ಒಳ್ಳೆಯವನ ದೇಹವನ್ನು 

ಸುತ್ತಿಕೊಳ್ಳುತ್ತವೆ ಬಹುಬಗೆಯಲೆ 

*

ಕಾಸು ಎಸೆಯುವರ ಮುಂದೆ 

ಕೈಯೊಡ್ಡುವವರಿರುವವರೆಗೂ 

ಮಹಾತ್ಮರಿಗೆ ಬೆಲೆಯಿದೆಯೆ

ಸ್ವಾತಂತ್ರ್ಯ ಸ್ವ ಹಿತದ ತಂತ್ರವನು 

ದೇಶದ ಮಂದಿಗೆ ಕಲಿಸಿ 

ಹೋಗಿದ್ದು ವಿಶೇಷವೆ

*

ನಾಯಕರು ದೇಶ ಸುತ್ತಬೇಕು 

ಯಾಕೆಂದರೆ ಒಣಗಿದ 

ಭೂಮಿಯಲ್ಲೂ ಓಯಸೀಸ್ 

ಕಂಡುಬರುತ್ತದೆ

ವಿಮಾನದಲ್ಲಿ ಬಂದು 

ಹೋಗುವವರಿಗೆ ಭೂಮಿಯ 

ನರಕದ ಬಣ್ಣ ಕಾಣಿಸುವುದೆ

*

ಅನಾಹುತಗಳು ಕಣ್ಣ 

ಮುಂದೆಯೇ ನಡೆಯುತ್ತಿದ್ದರೂ 

ಸಂಬಂಧಿಸಿದವರು ಏ ಸಿ 

ರೂಪದಲ್ಲಿ ಮಲಗಿದ್ದಾರೆ

ದುಡಿದು ತಿನ್ನುವಗೆ ಬಡತನ 

ಶಾಪವಲ್ಲ; ಲಾಭದ ಹಣದಲ್ಲಿ 

ಕುಳಿತವಗೆ ಮಾತ್ರ ಬಡವರ 

ಶಾಪವೆ

*

ನಾನೇ ದೊಡ್ಡವನೆಂದು ತಿರುಗದಿರಿ 

ನಿಮ್ಮ ಹಿಂದೆಯೇ ನಿಮಗಿಂತ 

ದೊಡ್ಡವರಿದ್ದಾರೆ

ಮಾಳಿಗೆಯಲ್ಲಿ ಎಲ್ಲರೂ 

ವಾಸ ಮಾಡುತ್ತಾರೆ ಆದರೆ 

ಮಾಳಿಗೆಯಲ್ಲೇ ಇರುವವರು 

ಬೆರಳೆಣಿಕೆಯವರು ಮಾತ್ರವೆ

*

ಪ್ರಕೃತಿಯಲ್ಲಿ ಎಲ್ಲಾ ವರ್ಗದ 

ಜೀವಿಗಳಿದ್ದರೂ ಸಾಮರಸ್ಯದ 

ಕೊರತೆಯಿದೆ

ಬರೆಯುವುದು ವರ್ಣಮಾಲೆಯ 

ರೀತಿಯಾದರೂ ಬರೆಯುವ 

ಬರಹಗಳಲ್ಲಿ ವೈವಿಧ್ಯತೆಯಿದೆ !

*

ಮುತ್ತು ಸಿಗುವುದು ಚಿಪ್ಪು ಒಡೆದರೆ ! 

ಹಾಗೆಂದು ಜನರೇ, 

ಕಂಡ ಕಂಡ ಮನುಷ್ಯರ 

ಮಂಡೆಗೆ ಹೊಡೆಯದಿರಿ ; 

ಬುದ್ಧಿ  ಸಿಗುವುದೆಂದು !

*

ಜನರ ಮುಖ ಸೂರ್ಯನಂತೆ

ಕೆಲವೊಮ್ಮೆ ಚಂದ್ರನಂತೆ

ಮಗದೊಮ್ಮೆ 

ಮೋಡ ಮುಸುಕಿದಂತೆ !

*

ಜನರಲ್ಲಿ ಪಾಪ

ಜಾಸ್ತಿಯಾದಾಗ

ಜಲ

ಪಾಪನಾಶಿನಿಯಾಯಿತು !

*

ಪ್ರಕೃತಿ ತತ್ವಗಳ ವಿರುದ್ಧ

ಜನ ಧ್ವನಿಯೆತ್ತಿದಾಗ

ಗುಡ್ಡೆ ಹರಿದು ಬಿದ್ದಿತು

ಸರ್ವ ನಾಶವಾಯಿತು ! 

*

ಇಂದಿನ ಮಾಫಿಯಾಗಳಲ್ಲಿ 

ಶಿಕ್ಷಣವೂ ಒಂದು ! 

ಇದರ ನೆರಳಿನಲ್ಲಿಯೇ ಉಳಿದೆಲ್ಲವೂ 

ತಮ್ಮ ಜಾಲವನ್ನು 

ಹರಡಿಕೊಂಡಿವೆ ! 

*

ಯಾವುದೇ ಭೂಗತ ಚಟುವಟಿಕೆ , 

ಡ್ರಗ್ ಮಾಫಿಯಾದ ಹಿಂದೆ 

ರಾಜಕೀಯ ; ಜನರ ರಕ್ಷಣೆ 

ಮಾಡುವ ದೊಡ್ಡ ದೊಡ್ಡ 

ಅಧಿಕಾರಿಗಳ ಕೃಪಾಕಟಾಕ್ಷ 

ಇದ್ದೇ ಇರುವುದು ಇಂದು 

ನಿನ್ನೆಯ ವಿಚಾರವಲ್ಲ ! 

ಅನಾದಿಕಾಲದಿಂದಲೂ 

ನಡೆದುಕೊಂಡು ಬಂದದ್ದೇ 

ಆಗಿದೆ . ಇದನ್ನು ಮೂಲದಿಂದಲೇ 

ಬೇರು ಸಹಿತ ಕಿತ್ತು ಬಿಸಾಡುತ್ತೇನೆ 

ಎನ್ನುವುದು ಉತ್ತರನ ಪೌರುಷ ?!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ