ಮನವನದ ತುಂಬೆಲ್ಲವೂ ನಿನ್ನೆದೆಯ ಉಸಿರು ಸಖಿ

ತನುವಿಂದು ಬಯಸಿದರೆ ಅಪ್ಪುಗೆಯೆ ಬಸಿರು ಸಖಿ

 

ಮೋಹವಿಂದು ಅರಳದೆ ದಾಹವು ತೀರುವುದೆ ಹೇಳು

ಕಹಿಯೆನಿಸುವ ಒಗರಿದ್ದರೆ ಸುಖವಿರದೆ ಕೆಸರು ಸಖಿ

 

ನಷ್ಟಗಳ ನಡುವೆ ಅಲ್ಲಿ ಕೆರಳಿ ಅರಳುವುದೆ ಪ್ರೀತಿ

ತಪ್ಪು ಒಪ್ಪುಗಳ ಬದುಕಲ್ಲಿ ಉಳಿವುದೆ ಹೆಸರು ಸಖಿ

 

ಜೇನಿರುವ ಗೂಡಿನೊಳಗೆ ಸವಿಯು ಇದ್ದರೇನು ಫಲ

ಬಾನು ಮಳೆ ಸುರಿಸಿತೋ ಮನದೊಳಗೆ ಒಸರು ಸಖಿ 

 

ಸೇರಿರುವ ಹೃದಯಗಳ ಭಾವನೆ ಅರಿತೆಯಾ ಈಶಾ

ಕನಸುಗಳ ಜೊತೆಯಿರುವ ನನಸುಗಳೆ ಹಸಿರು ಸಖಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ