ಯಾರೋ ಇಹರು ಎಂದೂ ಬಂದೆ 

ಯಾರೂ ಇರದೆ ನೊಂದೂ ಬೆಂದೆ 

ಕನಸೂ ಕನಸೋ ಅರಳೀ ನನಸು 

ಕಾಣದಂತೆಯೇ ಬಂತೂ ನಿಂದೆ

 

ಸೊರಗಿ ಸೋತ ಗಿಡದಿ ಚಿಗುರೇ

ಚಿಗರೆಗೀಗ ಊಟವೂ ಸಿಗದೇ

ಹಸಿವು ಹಸಿವಿನಲ್ಲೇ ಬಸಿರೇ 

ಒಣಗಿ ನಿಂತ ಬದುಕಲೇ ಉಸಿರೇ 

 

ಕಣ್ಣ ನೋಟದೊಳಗೆ ಇಹುದೇ

ಚೆಲುವ ಕಾಂತಿ ಮೋಹ ಉಡುಗೆ 

ಬಾಳ ಪಥದ ಜೊತೆಗೆ ಯಾರೋ 

ಮನದ ಸನಿಹ ಸುಳ್ಳೇ ಬೆಸುಗೆ 

 

ಇರುವ ಮಕ್ಕಳು ದೂರ ಹೋಗೆ

ಹೃದಯದೊಳಗೆ ಹರುಷ ನಡುಗೆ 

ವಯಸ್ಸು ಮಾಗಿ ಖುಷಿಯ ಕಳೆಯೆ

ಜೀವ ಚಲಿಸಿತೋ ಸಾವಿನೆಡೆಗೆ 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ