ನಿನ್ನ ತಪ್ಪಿಗೆ ಶಿಕ್ಷೆ ಆಗಲೇಬೇಕು. ನಿನ್ನದು ಅಂತಿತಾ ತಪ್ಪಲ್ಲ. ನೀನು ಕೊಲೆಗಾರ ಹಾಗಾಗಿ ಇದಕ್ಕೆ ಬಹುದೊಡ್ಡ ಶಿಕ್ಷೆಯ ಅಗತ್ಯ ಇದೆ. ಅದಲ್ಲದೆ ನೀನು ಯಾವತ್ತೂ ಒಂದು ದಿನ ತಪ್ಪು ಮಾಡಿದವನಲ್ಲ. ಪ್ರತಿದಿನವೂ ತಪ್ಪು ಮಾಡುತ್ತಾನೆ ಇರುವವನು. ಆ ಕಾರಣಕ್ಕೆ ನಿನ್ನನ್ನ ಶಿಕ್ಷಿಸಲೇಬೇಕಾಗಿದೆ. ಪ್ರತಿದಿನ ಪ್ರತಿ ಕ್ಷಣ ನೀನು ಕೊಲೆಗಾರನಾಗುತ್ತಿದ್ದೀಯ. ನಿನ್ನಿಂದ ಕೊಲೆಯಾದವರು ಪ್ರತಿದಿನವೂ ಇಲ್ಲಿ ದೂರನ್ನ ದಾಖಲಿಸುತ್ತಿದ್ದಾರೆ. ನಿನ್ನ ಶಿಕ್ಷೆಯ ಪ್ರಮಾಣ ತುಂಬಾ ದೊಡ್ಡದಾಗುವ ಹಂತದಲ್ಲಿದೆ. ನಿನಗೆ ಹೇಳುವುದನ್ನ ಮರೆತಿದ್ದೆ .ನೀನು ಕೊಂದಿರುವುದು ಸಮಯ ರಾಯನನ್ನ. ಆತನಿಗೆ ತುಂಬಾ ನೋವಿದೆ. ನಿನ್ನ ಏಳಿಗೆಗೆ ತನ್ನ ಇಡೀ ದಿನವನ್ನ ನಿಮ್ಮೊಂದಿಗೆ ಹಂಚಿಕೊಂಡಿದ್ದಾನೆ. ಆದರೆ ಪ್ರತಿ ಕ್ಷಣವೂ ನೀನು ಅವನನ್ನ ಕೊಂದು ಅವನ ನಾಶವನ್ನು ಮಾಡುತ್ತಿದ್ದೀಯಾ. ಆತನಿಗೆ ತಾನು ಸರಿಯಾಗಿ ಬಳಕೆಯಾಗುತ್ತಿಲ್ಲ ಅನ್ನುವ ಬೇಸರವಿದೆ . ಹಾಗಾಗಿ ದೂರನ್ನ ದಾಖಲಿಸಲಾಗಿದೆ. ಶಿಕ್ಷೆ ಅಂತೂ ಕಾಯುತ್ತಿದೆ. ಶಿಕ್ಷೆಯ ಪ್ರಮಾಣ ಕಡಿಮೆಯಾಗಬೇಕಾದರೆ ಇನ್ನು ಮುಂದೆ ಸಮಯವನ್ನ ಕೊಲ್ಲುವುದನ್ನ ನಿಲ್ಲಿಸಿ ಬಿಡು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!