ಮಾತಿರದ ಸಂಬಂಧವು ಬದುಕಿನಲಿ ಬೇಕೇ
ಬತ್ತಿರುವಂತ ಕನಸುಗಳು ನನಸಿನಲಿ ಬೇಕೇ
ಬಣ್ಣನೆಯ ಮಾತಿಗೆ ಅರ್ಥವು ಇದೆಯೇನು
ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ
ಬತ್ತೇರಿಯ ಮೇಲ್ಗಡೆ ನಿಂತ ಅನುಭವವಿಂದು
ಮೋಹವೇರದ ಬತ್ತಳಿಕೆ ಚೆಲುವಿನಲಿ ಬೇಕೇ
ಸುಂದರ ವಸ್ತುವಿನ ಒಳಗೋಡೆ ಹೊಲಸಾಗಿದೆ
ಫಲವಿರದ ಬರಿ ಒಡಲು ಅಸಲಿನಲಿ ಬೇಕೇ
ಈಶನ ಪೀಕಲಾಟ, ನಡುವೆ ಸವಾರಿಯೇನು
ಫಸಲಿರದೇ ಸವಿಯಾಸೆ,ಮನಸಿನಲಿ ಬೇಕೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!