ಅವನು ಬೇಸರಿಸಿಕೊಂಡಿದ್ದಾನೆ. ಗೌರವ ಸಿಗದೇ ಇದ್ದದ್ದಕ್ಕೆ. ಆತ ಹಲವು ವರ್ಷಗಳಿಂದ ಪರಿಶ್ರಮಪಟ್ಟು ರಾಜ್ಯ ರಾಷ್ಟ್ರಗಳನ್ನ ಪ್ರತಿನಿಧಿಸಿ ಅಂತರಾಷ್ಟ್ರೀಯ ಪದಕವನ್ನು ಪಡೆದ. ಹಾಗೆ ಪದಕವನ್ನು ಕೊರಳಿಗೇರಿಸಿದಾಗ ರಾಷ್ಟ್ರಗೀತೆ ಮೊಳಗಿದಾಗ ಮೈಮನ ರೋಮಾಂಚನವಾಗಿತ್ತು. ದೇಶಕ್ಕೆ ಗೌರವ ಸಿಕ್ಕ ಇಮ್ಮಡಿ ಖುಷಿಯಿತ್ತು. ಆದರೆ ದೇಶಕ್ಕೆ ಮರಳಿ ಬಂದಾಗ ಕನಿಷ್ಠ ಗೌರವೂ ಸಿಗಲಿಲ್ಲ. ಅವರ ಪಕ್ಕದ ಮನೆಯವರಿಗೂ ಆತನ ಬಗ್ಗೆ ತಿಳಿದಿಲ್ಲ. ಆತನ ಸಾಧನೆ ಬಗ್ಗೆ ಯಾವ ಮಾಧ್ಯಮವು ಸುದ್ದಿ ಮಾಡಲಿಲ್ಲ. ಆದರೆ ಪರಿಚಯವಿಲ್ಲದ ಊರಿನವರು ಯಾವುದೋ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಅವರು ದೊಡ್ಡ ಸಾಧಕರಾದರು, ಇವರ ಊರಿನಲ್ಲಿ ದೊಡ್ಡ ಕಾರ್ಯಕ್ರಮದ ವೇದಿಕೆಯಲ್ಲಿ ಅವರಿಗೆ ಸನ್ಮಾನವಾಯಿತು. ಅವರನ್ನು ನೋಡುವುದಕ್ಕೆ ಜನ ಸುತ್ತುವರೆದು ನಿಂತರು. ಆತನಿಗೆ ಅದು ಯಾವುದರ ಅವಶ್ಯಕತೆಯೂ ಇಲ್ಲ ಆದರೆ ಕನಿಷ್ಠ ಗೌರವ ಮತ್ತು ಹತ್ತೂರಿಗೆ ತಿಳಿಯುವಂತಾಗಬೇಕು. ಈ ಸಾಧನೆಯನ್ನ ಇನ್ನೊಂದಷ್ಟು ಹೆಚ್ಚು ಜನರು ಮಾಡುವಂತಾಗಬೇಕು ಅನ್ನೋದಷ್ಟೇ ಆತನ ಆಸೆ. ಆಸೆಗಳು ಆಸೆಗಳಾಗಿಯೇ ಉಳಿದವು ಜನರು ಬದಲಾಗಲಿಲ್ಲ,, ಮಾಧ್ಯಮದ ರೂಪವು ಬದಲಾಗಲಿಲ್ಲ. ಆತ ಬೇಸರಿಸಿಕೊಂಡರು ಮತ್ತೆ ಮೈದಾನಕ್ಕೆ ತೆರಳಿ ಅಭ್ಯಾಸ ಮಾಡುತ್ತಿದ್ದಾನೆ ಇನ್ನೊಂದು ಸಲ ದೇಶಕ್ಕೆ ಪದಕ ತರುವ ನಿರೀಕ್ಷೆಯಲ್ಲಿದ್ದಾನೆ ಮತ್ತೆ ನಾವು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ