ದೇಹದಲ್ಲಿ ತ್ರಾಣವಿಲ್ಲ, ಬದುಕಿನಲ್ಲಿ ಆಸೆಗಳಿಲ್ಲ, ಎಲ್ಲವೂ ಮುಗಿದುಹೋಗಿದೆ. ಕ್ಷಣದಲ್ಲಿ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಎದುರಿಗಿದ್ದವರ ಪ್ರಾಣವನ್ನೇ ತೆಗೆದಿದ್ದಾರೆ, ಶಿಕ್ಷೆ ಘೋಷಣೆಯಾಯಿತು ಅವರ ಹಣೆಪಟ್ಟಿಗೆ ಜೀವಾವಧಿ ಶಿಕ್ಷೆ ಅಂಟಿಬಿಟ್ಟಿತ್ತು. ಮನೆಯವರು ದೂರಾದರು, ಊರವರು ಮರೆತೆಬಿಟ್ಟರು, ಸಂಬಂಧಿಕರು ಅಪರಿಚಿತರಾದರು, ಬದುಕಿನ ಎಲ್ಲಾ ಆಸೆಗಳನ್ನು ಕಳೆದುಕೊಂಡು ದಿನವನ್ನು ದೂಡುತ್ತಿದ್ದಾರೆ. ಸಾವು ಒಂದನ್ನ ಎದುರು ನೋಡುತ್ತಿದ್ದಾರೆ, ಹೊರ ಜಗತ್ತಿನ ಊರುಕೇರಿ ಜಾತ್ರೆ ಕಾರ್ಯಕ್ರಮಗಳನ್ನ ಭೇಟಿ ಮಾಡುವ ಹಾಗಿಲ್ಲ, ಜೊತೆಗೆ ತನ್ನವರು ಅಂದುಕೊಳ್ಳುವವರ ಕೈ ಹಿಡಿದು ಓಡಾಡುವ ಹಾಗಿಲ್ಲ ಪೇಟೆ ಬೀದಿಯಲ್ಲಿ ನಡೆಯುವ ಹಾಗಿಲ್ಲ ಎಲ್ಲವೂ ನಾಲ್ಕು ನಾಲ್ಕು ಗೋಡೆಯ ಒಳಗಡೆ ಒಂದೇ ತರನಾದ ಬಟ್ಟೆಯಲ್ಲಿ ಅದೇ ಆಹಾರ ಕ್ರಮದಲ್ಲಿ ರೋಸಿ ಹೋಗಿಬಿಟ್ಟಿದೆ ತಪ್ಪು ಮಾಡಬಾರದಿತ್ತು ಅನ್ನುವ ಪ್ರಾಯಶ್ಚಿತ ಕಾಡಿದೆ ಆದರೂ ಜೀವನದ ಅವಧಿ ಮುಗಿಯುವವರೆಗೂ ಇದೇ ಗೋಡೆಗಳನ್ನು ನೋಡುತ್ತಾ ಬದುಕಬೇಕಾಗಿದೆ ಅವನಿಗೆ ನೋವಿದೆ ತಾನು ಮಾಡಿದ ತಪ್ಪಿನ ಅರಿವಾಗಿದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!