ಹೆಜ್ಜೆ ಇಡುವುದನ್ನು ಕಲಿಯಬೇಕು. ಹೆಗಲ ಮೇಲೆ ಭಾರ ಹೆಚ್ಚಾಗ್ತಾ ಹೋಗುತ್ತೆ. ಮೊದಲೆರಡು ಸಲ ಕಷ್ಟ ಅನಿಸುತ್ತೆ ಆದರೆ ಅದನ್ನೇ ಅಭ್ಯಾಸ ಮಾಡಿಕೊಂಡರೆ ಹೆಚ್ಚು ಹೆಚ್ಚು ಭಾರ ಹೊರುವ ಶಕ್ತಿಯನ್ನು ಸಂಪಾದಿಸಿದರೆ ಇನ್ನು ದೂರ ನಡೆಯುವುದಕ್ಕೆ ಸಾಧ್ಯ ಇದೆ. ಹೆಚ್ಚು ಭಾರ ಹೊತ್ತ ಕಾರಣ ನಡೆಯುವುದಕ್ಕೆ ಸಾಧ್ಯ ಇಲ್ಲ ಅಂತಂದುಕೊಂಡು ಬಿಟ್ಟರೆ ನಾವಲ್ಲಿಯೇ ಉಳಿದುಬಿಡುತ್ತೇವೆ. ಪ್ರಯತ್ನಿಸಲೇಬೇಕು ಭಾರವನ್ನ ಹೆಗಲ ಮೇಲೆ ಹೊತ್ತು ಒಂದೊಂದೇ ಹೆಜ್ಜೆಗಳ ನೆಡಿತಾ ಹೋದ ಹಾಗೆ ದೇಹ ಅದನ್ನ ಒಪ್ಪಿಕೊಳ್ಳುತ್ತೆ. ಅದು ಭಾರ ಅಂತ ಅನಿಸುವುದಿಲ್ಲ. ಯಾವತ್ತೂ ಭಾರ ಕಡಿಮೆಯಾಗುವುದಿಲ್ಲ ಪ್ರತಿದಿನ ಹೆಚ್ಚಾಗ್ತಾ ಹೋಗುತ್ತೆ. ನೀನು ಮೊದಲಿದ್ದ ಹಾಗೆ ಇಲ್ಲ ಬೆಳಿತಾ ಇದ್ದೀಯ ಹೆಚ್ಚು ಭಾರ ಹೊರುವ ಶಕ್ತಿಯನ್ನು ಸಂಪಾದಿಸಿದ್ದೀಯಾ? ಹಾಗಾಗಿ ಹೇಳುವುದಿಷ್ಟೇ ಇನ್ನೊಂದಷ್ಟು ಹೆಚ್ಚು ಭಾರವನ್ನು ಹೊತ್ತು ಮುಂದೆ ಹೆಜ್ಜೆ ಇಡುತ್ತ ಹೋಗು ತುಂಬ ದೂರ ಆರಾಮಾಗಿ ತಲಪ್ತೀಯ. ಹಾಗೆ ಎದುರಿಗೆ ಸಿಕ್ಕ ಆತ್ಮೀಯರೊಬ್ಬರು ಹೆಗಲು ತಟ್ಟಿ ಒಳ್ಳೆಯ ಮಾತನಾಡಿದರು ಮುಂದೇನು ಅನ್ನುವ ಪ್ರಶ್ನೆಗಳಷ್ಟೇ ಮನಸ್ಸು ಒಳಗೆ ತುಂಬಿತ್ತು ಅದಕ್ಕೆ ತಕ್ಕನಾದ ಉತ್ತರವನ್ನು ಅವರು ನೀಡಿದ್ದರು ಅದನ್ನ ಹಾಗೆಯೇ ನನ್ನೊಳಗೆ ತುಂಬಿಸಿಕೊಂಡು ಮುಂದೆ ಹೆಜ್ಜೆ ಇಟ್ಟೆ ಬಾರ ಹೆಚ್ಚಾದರೂ ಸಹ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!