ಗಝಲ್ ೧

ಮುತ್ತುಗಳು ಕತೆಯಾಗುತ್ತವೆ ಸುಮ್ಮನೆ

ಮಾತುಗಳು ಶನಿಯಾಗುತ್ತವೆ ಸುಮ್ಮನೆ

 

ಚಿತ್ರದಲ್ಲಿರುವಂತಹ ಮೊಗವು ನಿಜವೇ

ಸತ್ಯಗಳೂ ಸೆರೆಯಾಗುತ್ತವೆ ಸುಮ್ಮನೆ

 

ನನಸಿರದಂತ ಜೀವನದಲ್ಲಿ ಆತುರವೇ 

ಮನಸುಗಳು ಬಲಿಯಾಗುತ್ತವೆ ಸುಮ್ಮನೆ

 

ಬೆಂದಿರದ ವಸ್ತುಗಳಿಂದ ಲಾಭವಿದೆಯೇ 

ಉತ್ತರಗಳು ಹೊರೆಯಾಗುತ್ತವೆ ಸುಮ್ಮನೆ

 

ಬರಡಾದ ಹೃದಯಗಳಿವೆಯೋ ಈಶಾ

ಪ್ರೀತಿಗಳು ಕಾಣೆಯಾಗುತ್ತವೆ ಸುಮ್ಮನೆ

***

ಗಝಲ್ ೨

ನಿನ್ನ ನಾನು ಬಯಸಿ ನೊಂದೆ ಗೆಳೆಯಾ

ಮೋಹ ತುಂಬಿ ಸನಿಹ ನಿಂದೆ ಗೆಳೆಯಾ 

 

ಮಾತು ಮಾತು ಹೂತು ಹೋಯ್ತೆ ಏತಕೆ 

ಕತೆಯ ನಡುವೆ ಹೀಗೆ ಬೆಂದೆ ಗೆಳೆಯಾ 

 

ಹಳೆಯ ನೆನಪು ಮತ್ತೆ ಬೇಕೆ ಎಂದಿಗು 

ತಿಳಿಯಲೆಂದು ಒಲವ ತಂದೆ ಗೆಳೆಯಾ 

 

ಪ್ರೀತಿಯಿಂದ ಕರೆಯುತಿರುವೆ ಬಾರೆಯ

ಕನಸಿನೊಳಗೆ ನನಸು ಇಂದೆ ಗೆಳೆಯಾ 

 

ಮೆರೆದ ದಿನವ ಮರೆಯಬೇಡ ಈಶಾ

ಮದನ ನೀನು ಸವಿಯ ಬಂದೆ ಗೆಳೆಯಾ 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ