ಜೋಳ ಅಥವಾ ಸ್ವೀಟ್ ಕಾರ್ನ್ ಅನ್ನು ಕುಕ್ಕರಿನಲ್ಲಿ ಮೂರು ವಿಶಿಲ್ ಬರುವವರೆಗೆ ಬೇಯಿಸಿ. ನೀರು ಬಸಿಯಿರಿ. ಒಂದು ತೆಳು ಬಟ್ಟೆಯ ಮೇಲೆ ೩೦ ನಿಮಿಷ ಹರಡಿರಿ. ಮಿಕ್ಸರ್ ನಲ್ಲಿ ಹಾಕಿ ಎರಡೇ ಎರಡು ಸುತ್ತು ತಿರುವಿ. ಒಂದು ದೊಡ್ಡ ಬೋಗುಣಿಯಲ್ಲಿ ಜೋಳ, ಕೆಂಪು ಮೆಣಸಿನಕಾಯಿ ಹುಡಿ, ಚೀಸ್, ಮೈದಾ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ. ರುಚಿ ನೋಡಿ. ಉಪ್ಪು, ಖಾರ ಸರಿ ಮಾಡಿ.

ತಯಾರಿಸಿದ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿರಿ. ಒಂದು ಸಣ್ಣ ಬೋಗುಣಿಯಲ್ಲಿ ಹಾಲು ಇಡಿ. ಒಂದು ಅಗಲವಾದ ಪ್ಲೇಟಿನ ಮೇಲೆ ಬ್ರೆಡ್ ಹುಡಿಯನ್ನು ಇಡಿ. ತಯಾರಿಸಿದ ಉಂಡೆಗಳನ್ನು ಹಾಲಿನಲ್ಲಿ ಮುಳುಗಿಸಿ ಕೂಡಲೇ ಬ್ರೆಡ್ ಹುಡಿಯಲ್ಲಿ ಹೊರಳಾಡಿಸಿ, ಒಂದು ಅಗಲವಾದ ಪ್ಲೇಟಿನ ಮೇಲೆ ಜೋಡಿಸಿ. ಮೇಲಿನಿಂದ ಪ್ಲಾಸ್ಟಿಕ್ ಹಾಳೆಯನ್ನು ಮುಚ್ಚಿ ೩೦ ನಿಮಿಷ ಫ್ರಿಡ್ಜಿನಲ್ಲಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಹದ ಉರಿಯಲ್ಲಿ ಉಂಡೆಗಳನ್ನು ಹೊಂಬಣ್ಣಕ್ಕೆ ಬರುವಂತೆ ಕರಿದು ತೆಗೆಯಿರಿ. ಬಿಸಿ ಬಿಸಿ ಬ್ರೆಡ್ ಕಾರ್ನ್ ಚೀಸ್ ಬಾಲ್ಸ್ ಗಳನ್ನು ಟೊಮೆಟೋ ಕೆಚಪ್, ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ಸವಿಯಿರಿ.