ಅನಿಷ್ಠ ಹೋಗಿಪ್ಪ ದಾರಿಲಿ ಹುಲ್ಲು ಹುಟ್ಟ

ಗರಿಷ್ಠ ಪದಂಗಳ ಬಳಸಿಯೂ ಪದ್ಯ ಸೊಟ್ಟ

 

ಮಾಳಿಗೆ ಕನಸಿನ ಕಂಡವ ಉದ್ಧಾರ ಆಯ್ದನೋ

ಚಿಂತೆ ಮಾಡ್ಯೊಂಡವನ ಬದುಕು ಗಿರಿಶಿಖರ ಬೆಟ್ಟ

 

ಪೆಟ್ಟಿಂಗೆ ಹೆದರಿಕ್ಕಿ ಎಲ್ಯೂದೆ ಹೋಗೆಡ ಮಾಣಿಯೆ

ರಟ್ಟೆಯ ಬಲಯಿದ್ದರೆ ಬೇರೆಯವನ ಮೆಟ್ಲಿನ ಮೆಟ್ಟ

 

ಊಟಕ್ಕಿಲ್ಲದ ಉಪ್ಪಿನಕಾಯಿ ರುಚಿಯಿಲ್ಲೆ ಹೇಳಿದ

ಕಾಟವ ಕೊಡ್ತವರೆಡೆಯೇ ಸಜ್ಜನ ಊರು ಬಿಟ್ಟ

 

ಎಲ್ಲಿ ಹೋದರೂ ಸ್ನೇಹಿತರ ಕೊರತ್ತೆ ಇಲ್ಲೆ ಈಶಾ

ದಾರೀಲಿ ನೆರಳೊಂದು ಸಿಕ್ಕುತ್ತೇಳಿ ಸೆಸಿಯ ನೆಟ್ಟ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ