ಕಪ್ಪು ಕಡಲೆ ಹಾಗೂ ಕಡಲೇಬೇಳೆಯನ್ನು ಚೆನ್ನಾಗಿ ತೊಳೆದು, ಮುಳುಗುವಷ್ಟು ನೀರಿನಲ್ಲಿ ೬-೮ ಗಂಟೆ ನೆನೆಸಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಸೇರಿಸಿ, ನೆನೆಸಿದ ನೀರಿನೊಂದಿಗೆ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ನೀರು ಬೇಕಾದಷ್ಟೇ ಹಾಕಿ, ಹೆಚ್ಚಾಗಬಾರದು. ಕೊತ್ತಂಬರಿ ಸೊಪ್ಪು, ಈರುಳ್ಳಿ, ಗರಂ ಮಸಾಲೆ, ಚಾಟ್ ಮಸಾಲೆ, ಹಸಿರು ಮೆಣಸಿನಕಾಯಿ, ಸಕ್ಕರೆ ಸೇರಿಸಿ ತರಿತರಿಯಾಗಿ ರುಬ್ಬಿರಿ.
ರುಬ್ಬಿದ, ಬೇಯಿಸಿದ ಮಿಶ್ರಣ ಹಾಗೂ ಬ್ರೆಡ್ ಹುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ, ತಯಾರಿಸಿದ ಮಿಶ್ರಣದಿಂದ ಸಣ್ಣ ಉಂಡೆಗಳನ್ನಾಗಿ ಮಾಡಿ ಅಂಗೈ ಮಧ್ಯೆ ಇಟ್ಟು ಮೆತ್ತಗೆ ಅದುಮಿರಿ. ಮಧ್ಯದಲ್ಲಿ ಪ್ಂದು ಮೊಝೆರುಲ್ಲಾ ಚೀಸ್ ತುಂಡು ಮತ್ತು ಒಂದು ಪುದೀನಾ ಎಲೆ ಇಡಿ. ಬದಿಗಳನ್ನು ಮಡಚಿ ಪುನಃ ಉಂಡೆಯನ್ನಾಗಿ ಮಾಡಿ. ಅಂಗೈಯಿಂದ ಸ್ವಲ್ಪ ಅದುಮಿ ಮದ್ದೂರು ವಡೆ (ಪ್ಯಾಟೀಸ್) ಆಕಾರಕ್ಕೆ ತನ್ನಿ. ಬಿಸಿ ತವಾದ ಮೇಲೆ ಎಣ್ಣೆ ಹಾಕಿ ತಯಾರಿಸಿದ ಕಬಾಬ್ ಗಳನ್ನು ಎರಡೂ ಬದಿಯಲ್ಲಿ ಕೆಂಪಗೆ ಹುರಿಯಿರಿ. ಬಿಸಿಬಿಸಿ ಸ್ಪೆಷಲ್ ಬ್ರೆಡ್ ಶಮ್ಮಿ ಕಬಾಬ್ ಗಳನ್ನು ಕೊತ್ತಂಬರಿ ಸೊಪ್ಪಿನ ಚಟ್ನಿಯೊಂದಿಗೆ ಸವಿಯಿರಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!